Publish Date: Tue, 18 May 2021 (10:44 IST)
Updated Date: Tue, 18 May 2021 (10:46 IST)
ಮುಂಬೈ: ಬಾಲಿವುಡ್ ನಟ ಸೋನು ಸೂದ್ ಈಗ ತಮ್ಮ ಫೌಂಡೇಷನ್ ಮೂಲಕ ಕೊರೋನಾ ಪೀಡಿತರಿಗೆ ನೆರವಾಗುತ್ತಲೇ ಇದ್ದಾರೆ. ಆದರೆ ಇದನ್ನೇ ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ.
ಸೋನು ಸೂದ್ ಕೆಲಸಕ್ಕೆ ಹಲವರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಿದ್ದಲ್ಲದೆ, ಕೆಲವು ಎನ್ ಜಿಒಗಳೂ ಸಹಾಯ ಮಾಡುತ್ತಿವೆ. ಆದರೆ ಯಾವತ್ತೂ ಸೋನು ದೇಣಿಗೆ ಕೊಡಿ ಎಂದು ಬಹಿರಂಗವಾಗಿ ಕೈ ಚಾಚಿಲ್ಲ.
ಆದರೆ ಕೆಲವು ಕಿಡಿಗೇಡಿಗಳು ಸೋನು ಸೂದ್ ಫೌಂಡೇಷನ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ದುಡ್ಡು ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಸೋನು ಎಚ್ಚರಿಕೆ ನೀಡಿದ್ದು, ಇಂತಹ ಪೋಸ್ಟ್ ಗಳು ನಕಲಿ, ಎಚ್ಚರವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.