ಬೆಂಗಳೂರು: ಯಾವುದೇ ದೇವಾಲಯಕ್ಕೆ ಹೋದರೆ ಅಲ್ಲಿ ಪ್ರದೋಷ ಪೂಜೆ ಎಂಬ ಫಲಕ ಕಾಣುತ್ತೇವೆ. ಅಸಲಿಗೆ ಪ್ರದೋಷ ಪೂಜೆ ಎಂದರೇನು? ಅದರ ಮಹತ್ವವೇನು ಗೊತ್ತಾ?
ಸಂಜೆ ನಾಲ್ಕ ಮೂವತ್ತೈದರಿಂದ ಆರೂವರೆಯವರೆಗಿನ ಕಾಲವನ್ನು ಪ್ರದೋಷ ಕಾಲ ಎನ್ನುತ್ತೇವೆ. ಇದು ಶಿವ ಲೋಕ ಕಲ್ಯಾಣಕ್ಕಾಗಿ ಹಾಲಾಹಲವನ್ನು ಸೇವಿಸಲು ಧ್ಯಾನದಿಂದ ಎಚ್ಚರಗೊಂಡ ಕಾಲ. ಈ ಕಾಲದಲ್ಲಿ ಪೂಜೆ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.
ಅದರಲ್ಲೂ ಶನಿ ಪ್ರದೋಷ ಪೂಜೆ ವಿಶಿಷ್ಟವಾದದ್ದು. ಒಂದು ಶನಿಪ್ರದೋಷ ಪೂಜೆ ಮಾಡಿದರೆ ಐದು ವರ್ಷ ಶಿವ ದೇವಾಲಯಕ್ಕೆ ಹೋದ ಫಲ ಸಿಗುತ್ತದೆ. ಶನಿವಾರ ಪ್ರದೋಷ ಪೂಜೆ ಮಾಡುವುದರಿಂದ ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ದೊರೆಯುತ್ತದೆ.
ಇನ್ನು, ಸಾಡೆ, ಸಾತಿಯ ಪ್ರಭಾವ ಕಡಿಮೆಯಾಗುತ್ತದೆ ಅಥವಾ ಹೊರಟುಹೋಗುತ್ತದೆ. ಈ ದಿನ ಶನಿ ಮತ್ತು ಈಶ್ವರ ಇಬ್ಬರೂ ಈ ಪೂಜೆ ಮಾಡುವವರನ್ನು ಅನುಗ್ರಹಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಪ್ರದೋಷ ಪೂಜೆ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ