Publish Date: Tue, 17 Sep 2019 (09:01 IST)
Updated Date: Tue, 17 Sep 2019 (09:03 IST)
ಬೆಂಗಳೂರು: ಹಿಂದೂ ಧರ್ಮದ ಅನುಸಾರ ಓಂ ಶಬ್ಧಕ್ಕೆ ಅದರದ್ದೇ ಆದ ಮಹತ್ವವಿದೆ. ಇದು ಮಾನಸಿಕ ಮಾತ್ರವಲ್ಲದೆ ದೈಹಿಕವಾಗಿಯೂ ನಮ್ಮನ್ನು ಗಟ್ಟಿಗೊಳಿಸುತ್ತದೆ.
ಓಂ ಮಂತ್ರ ಉಚ್ಛಾರಣೆ ಮಾಡುವುದರಿಂದ ಮಾನಸಿಕವಾಗಿ ಸದೃಢರಾಗುತ್ತೇವೆ. ಜತೆಗೆ ಇದು ಹಲವು ರೋಗಗಳನ್ನು ನಿವಾರಿಸುತ್ತದೆ ಕೂಡಾ. ಯಾವೆಲ್ಲಾ ರೋಗಗಳು ದೂರವಾಗುತ್ತದೆ ಗೊತ್ತಾ?
ಓಂ ಮಂತ್ರ ಪಠಿಸುವುದರಿಂದ ಥೈರಾಯ್ಡ್ ಗ್ರಂಥಿ ಮೇಲೆ ಪ್ರಭಾವ ಬೀರಿ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ. ಇದರಿಂದ ಭಯ ದೂರವಾಗುತ್ತದೆ. ಇದು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಪಚನ ಕ್ರಿಯೆ ಸರಿಯಾಗುತ್ತದೆ. ಇದು ಸುಸ್ತು, ಒತ್ತಡ ನಿವಾರಕ ಕೂಡಾ. ಅಲ್ಲದೆ ಶ್ವಾಸಕೋಶ ಸಮಸ್ಯೆಗಳು, ನಿದ್ರೆ ಸರಿಯಾಗದೇ ಇದ್ದರೆ, ಬೆನ್ನುಲುಬಿನ ಸಮಸ್ಯೆಯೂ ಓಂ ಮಂತ್ರ ಪಠಿಸುವುದರಿಂದ ನಿವಾರಣೆಯಾಗುತ್ತದೆ.