Publish Date: Fri, 22 Feb 2019 (08:55 IST)
Updated Date: Fri, 22 Feb 2019 (08:56 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಮೊದಲಿಗೆ ಮೇಷ ರಾಶಿ ನೋಡೋಣ.
ಮೇಷ ರಾಶಿಯವರದ್ದು ಒಂದು ರೀತಿಯಲ್ಲಿ ಡ್ಯಾಶಿಂಗ್ ಕ್ಯಾರೆಕ್ಟರ್. ಅವರನ್ನು ಆಳುವ ಗ್ರಹ ಮಂಗಳನಾಗಿರುವುದರಿಂದ ಅವರಿಗೆ ಲೋಕದ ಭಯವಿಲ್ಲ. ಇವರು ಪ್ರೀತಿಗೆ ಬೀಳುವುದೂ ಬೇಗ. ಹಾಗೇ ಅದನ್ನು ಜಗತ್ತಿಗೆ ಹೇಳಲು ಹೆದರುವವರೂ ಅಲ್ಲ.
ಆದರೆ ಮೇಷ ರಾಶಿಯವರನ್ನು ಲವ್ ಮಾಡುವ ಮೊದಲು ಎಚ್ಚರಿಕೆಯಿಂದಿರಿ. ಯಾಕೆಂದರೆ ಇವರು ಆರಂಭದಲ್ಲಿ ತೋರುವ ಲವ್, ರೊಮ್ಯಾಂಟಿಕ್ ಸೆನ್ಸ್ ಗಳಿಂದ ಬೇಗನೇ ಹೊರಬರುತ್ತಾರೆ. ಇದರಿಂದ ಕೆಲವೊಮ್ಮೆ ಭ್ರಮನಿರಸವಾಗುವುದೂ ಇದೆ. ಇವರು ಎಷ್ಟು ರೊಮ್ಯಾಂಟಿಕೋ ಅಷ್ಟೇ ಪ್ರಾಕ್ಟಿಕಲ್ ಕೂಡಾ. ಹಾಗಾಗಿ ತೀರಾ ನಿರೀಕ್ಷೆಗಳನ್ನು ಇವರಿಂದ ಇಟ್ಟುಕೊಳ್ಳಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ