Publish Date: Thu, 31 Jan 2019 (10:28 IST)
Updated Date: Thu, 31 Jan 2019 (10:30 IST)
ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ಆರೋಗ್ಯವೂ ಚೆನ್ನಾಗಿರುತ್ತದೆ.
ವಾತಾವರಣದ ಬದಲಾವಣೆಗೆ ನಮ್ಮನ್ನು ಹೊಂದಿಕೊಳ್ಳಲು ಮನುಷ್ಯ ಆಹಾರದಲ್ಲಿ ಬದಲಾವಣೆ ಮಾಡಲೇಬೇಕಾಗುತ್ತದೆ. ನಮ್ಮ ದೇಶದಲ್ಲಿ ಮಳೆ, ಚಳಿ ಮತ್ತು ಬೇಸಿಗೆಗಾಲ ಎಂಬ ಮೂರು ಮುಖ್ಯ ಋತುಗಳಿವೆ. ಪ್ರತಿಯೊಂದು ಮುಖ್ಯ ಋತುವು ಎರಡು ಋತುಗಳಲ್ಲಿ ವಿಭಜನೆಯಾಗುತ್ತದೆ. ವಿಭಜನೆಯಾದ ಋತುವಿನಲ್ಲಿ ಎರಡು ತಿಂಗಳಿರುತ್ತವೆ. ಆರು ಋತುಗಳು ಸೇರಿ ಒಂದು ವರ್ಷವಾಗುತ್ತದೆ.
ಹೇಮಂತ ಋತು
ಹೇಮಂತ ಋತುವು ಚಳಿಗಾಲದ ಆರಂಭದ ಕಾಲವಾಗಿದೆ. ಈ ಕಾಲದಲ್ಲಿ ಜೀರ್ಣಶಕ್ತಿಯು ಚೆನ್ನಾಗಿರುತ್ತದೆ. ಈ ಕಾಲದಲ್ಲಿ ಹೆಚ್ಚು ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸಬಹುದು. ಆದರೆ ಅತ್ಯಂತ ತಂಪು ಮತ್ತು ಒಣ ಪದಾರ್ಥಗಳನ್ನು ಸೇವಿಸದೇ ಇರುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ