Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ರಾಹ್ಮಿ ಮುಹೂರ್ತದಲ್ಲಿ ಶಿವ ಸಹಸ್ರನಾಮ ಹೇಳುವುದರ ಲಾಭವೇನು ಗೊತ್ತಾ?

ಬ್ರಾಹ್ಮಿ ಮುಹೂರ್ತದಲ್ಲಿ ಶಿವ ಸಹಸ್ರನಾಮ ಹೇಳುವುದರ ಲಾಭವೇನು ಗೊತ್ತಾ?
ಬೆಂಗಳೂರು , ಬುಧವಾರ, 30 ಜನವರಿ 2019 (09:12 IST)
ಬೆಂಗಳೂರು: ಜೀವನದಲ್ಲಿ ಸೋತು ನಿರಾಶೆ ಅನುಭವಿಸಿದವರಿಗೆ ಹೊಸ ಚೈತನ್ಯ ಒದಗಿಸುವವನು ಭಗವಾನ್ ಶಿವ. ಶಿವನ ಸಹಸ್ರನಾಮ ನಮ್ಮಲ್ಲಿ ಎಂತಹಾ ಬದಲಾವಣೆ ತರುತ್ತದೆ ಎಂದು ನೀವು ತಿಳಿದುಕೊಳ್ಳಲೇಬೇಕು.


ಶಿವನ ಸಹಸ್ರ ಹೆಸರುಗಳನ್ನು ಜಪಿಸಿ ಸ್ವತಃ ಮಹಾವಿಷ್ಣುವಿಗೆ ಶತ್ರುಗಳ ನಾಶ ಮಾಡುವ ಶಕ್ತಿ ಬಂದಿತ್ತಂತೆ. ಹೀಗಾಗಿ ಶಿವ ಸಹಸ್ರನಾಮ ಎನ್ನುವುದು ಜೀವನದಲ್ಲಿ ಹೊಸ ಚೈತನ್ಯ, ಗೆಲುವು ಮೂಡಿಸಲು ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬ ನಂಬಿಕೆಯಿದೆ.

ಪ್ರತಿನಿತ್ಯ ಮೂರು ಬಾರಿ ಅಥವಾ ಬೆಳಿಗ್ಗಿನ ಜಾವ ಶಿವ ಸಹಸ್ರ ನಾಮವನ್ನು ಜಪಿಸುವುದರಿಂದ ಮನೆಯ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಿ ಜಯ ಸಿಗುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ, ಇದು ಜೀವನದಲ್ಲಿ ಹೊಸ ಚೈತನ್ಯ ತುಂಬಿ ನಮ್ಮಲ್ಲಿ ಸಕಾರಾತ್ಮಕ ಚಿಂತನೆ ಮೂಡಲು ಕಾರಣವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶರದೃತುವಿನಲ್ಲಿ ಈ ಆಹಾರ ಸೇವಿಸಲೇಬಾರದು!