Publish Date: Tue, 29 Jan 2019 (09:06 IST)
Updated Date: Tue, 29 Jan 2019 (09:07 IST)
ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ಆರೋಗ್ಯವೂ ಚೆನ್ನಾಗಿರುತ್ತದೆ.
ವಾತಾವರಣದ ಬದಲಾವಣೆಗೆ ನಮ್ಮನ್ನು ಹೊಂದಿಕೊಳ್ಳಲು ಮನುಷ್ಯ ಆಹಾರದಲ್ಲಿ ಬದಲಾವಣೆ ಮಾಡಲೇಬೇಕಾಗುತ್ತದೆ. ನಮ್ಮ ದೇಶದಲ್ಲಿ ಮಳೆ, ಚಳಿ ಮತ್ತು ಬೇಸಿಗೆಗಾಲ ಎಂಬ ಮೂರು ಮುಖ್ಯ ಋತುಗಳಿವೆ. ಪ್ರತಿಯೊಂದು ಮುಖ್ಯ ಋತುವು ಎರಡು ಋತುಗಳಲ್ಲಿ ವಿಭಜನೆಯಾಗುತ್ತದೆ. ವಿಭಜನೆಯಾದ ಋತುವಿನಲ್ಲಿ ಎರಡು ತಿಂಗಳಿರುತ್ತವೆ. ಆರು ಋತುಗಳು ಸೇರಿ ಒಂದು ವರ್ಷವಾಗುತ್ತದೆ.
ವರ್ಷ ಋತುವಿನಲ್ಲಿನ ಆಹಾರ
ಇದು ವಾತ ಪ್ರಕೋಪ ಮತ್ತು ಪಿತ್ತಸಂಚಯನದ ಕಾಲವಾಗಿದೆ. ಈ ಕಾಲದಲ್ಲಿ ಊಟದಲ್ಲಿ ಎಲ್ಲ ರಸಗಳ ಸೇವನೆ ಮಾಡಬೇಕು ಮತ್ತು ಉಷ್ಣ ಪದಾರ್ಥಗಳನ್ನು ಸೇವಿಸಬೇಕು. ಅತಿ ಎಣ್ಣೆಯುಕ್ತ ಮತ್ತು ಒಣ ಪದಾರ್ಥಗಳನ್ನು ಸೇವಿಸಬಾರದು. ಧ್ರವ ಪದಾರ್ಥಗಳು ಅಲ್ಪ ಪ್ರಮಾಣದಲ್ಲಿರಬೇಕು. ಈ ಕಾಲದಲ್ಲಿ ಆಗಾಗ ಉಪವಾಸ ಮಾಡುವುದು ಲಾಭದಾಯಕವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ