ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.
3 ನೇ ತಾರೀಖಿನಂದು ಜನಿಸಿದವರು
3 ನೇ ದಿನಾಂಕದಂದು ಜನಿಸಿದವರು ಯಾವತ್ತೂ ಸಕಾರಾತ್ಮಕವಾಗಿ ಚಿಂತನೆ ಮಾಡುತ್ತಾರೆ. ಇವರು ಜೀವನದಲ್ಲಿ ಎಂತಹದ್ದೇ ಕಷ್ಟ ಬಂದರೂ ಅಷ್ಟೇ ವೇಗವಾಗಿ ಮರಳಿ ಸಹಜ ಸ್ಥಿತಿಗೆ ಬರುವ ಚಾಣಕ್ಯರು. ಇವರು ಕಷ್ಟಗಳಿಗೆ ಕೆಲವೊಮ್ಮೆ ಕೇರ್ ಲೆಸ್ ಗುಣ ತೋರಿಸುವ ಎದೆಗಾರಿಕೆ ಉಳ್ಳವರು.
ಈ ದಿನದಂದು ಜನಿಸಿದವರು ತಮಗನಿಸಿದ್ದನ್ನು ಭಯವಿಲ್ಲದೇ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಾರೆ. ಹೀಗಾಗಿ ಇವರಿಗೆ ಸವಾಲು ಎನಿಸುವಂತಹ ಪತ್ರಿಕೋದ್ಯಮ, ವಕೀಲಿ ವೃತ್ತಿ, ಶಿಕ್ಷಣ, ಬೋಧನೆ ಇತ್ಯಾದಿ ವೃತ್ತಿಗಳು ಹೇಳಿ ಮಾಡಿಸಿದಂತವು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ