ಬೆಂಗಳೂರು : ಮಹಾಶಿವರಾತ್ರಿಯಂದು ಶಿವಭಕ್ತರೆಲ್ಲರೂ ಶಿವನಾರಾಧನೆ , ವೃತ, ಉಪವಾಸವನ್ನು ಮಾಡುತ್ತಾರೆ. ಅಂದು ಮಹಿಳೆಯರು ಈ ರೀತಿ ದೀಪವನ್ನು ಹಚ್ಚಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆಯಂತೆ.
ಮಹಾಶಿವರಾತ್ರಿಯ ದಿನ ಮಹಿಳೆಯರು ಗೋದುಳಿ ಲಗ್ನದಲ್ಲಿ ಸ್ನಾನಾಧಿಗಳನ್ನು ಮಾಡಿ 3 ಮಣ್ಣಿನ ಹಣತೆಗಳನ್ನು ತೆಗೆದುಕೊಂಡು ಅದಕ್ಕೆ 2 ದೀಪದ ಬತ್ತಿಯನ್ನು ಹಾಕಿ ಆ ದೀಪವನ್ನು ಎಕ್ಕೆಯ ಗಿಡದ ಎಲೆಗಳನ್ನು ಹಣತೆಯ ಬತ್ತಿಯ ಮೇಲೆ ಹಾಕಿ ಒಂದು ಹಣತೆಯನ್ನು ಪೂರ್ವಕ್ಕೆ, ಪಶ್ಚಿಮಕ್ಕೆ, ಹಾಗೂ ಉತ್ತರಕ್ಕೆ ಮುಖ ಮಾಡಿ ಇಡಬೇಕು. ಅದಕ್ಕೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ದೀಪವನ್ನು ಹಚ್ಚಬೇಕು. ಬಳಿಕ ಶಿವನಾಮವನ್ನು ಜಪಿಸಬೇಕು.