Publish Date: Mon, 17 Feb 2020 (06:36 IST)
Updated Date: Mon, 17 Feb 2020 (06:38 IST)
ಬೆಂಗಳೂರು : ಪ್ರಶ್ನೆ : ನಾನು 42 ವರ್ಷದ ವಿವಾಹಿತ ಮಹಿಳೆ. ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದೇನೆ. ನಾನು ಡೇಟಿಂಗ್ ವೆಬ್ ಸೈಟ್ ನಲ್ಲಿ ಸ್ನೇಹಿತನೊಬ್ಬನನ್ನು ಭೇಟಿಯಾಗಿದ್ದೆ. ನಾವು ಈಗ ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ. ಅವನಿಗೂ ಕೂಡ ಮದುವೆಯಾಗಿ ಮಕ್ಕಳಿವೆ. ಈಗ ನಾವಿಬ್ಬರು ನಮ್ಮ ಕುಟುಂಬವನ್ನು ದೂರಮಾಡದೆ ರಹಸ್ಯವಾಗಿ ಮದುವೆಯಾಗಿ ಮಗುವನ್ನು ಹೊಂದಲು ಬಯಸುತ್ತಿದ್ದೇವೆ. ಮಗುವನ್ನು ಬೆಳೆಸಲು ಅವರು ಆರ್ಥಿಕವಾಗಿ ಸಹಾಯ ಮಾಡುವುದಾಗಿ ಹೇಳಿದ್ದಾರೆ. ನಾನು ಏನು ಮಾಡಲಿ?
ಉತ್ತರ : ನಿಮ್ಮ ಕುಟುಂಬಗಳನ್ನು ಬಿಟ್ಟು ಹೋಗದೆ ನೀವು ಹೇಗೆ ಮತ್ತು ಎಲ್ಲಿ ಮದುವೆಯಾಗಲು ಯೋಚಿಸಿದ್ದೀರಿ. ಇದು ಮುಂದೆ ನಿಮಗೆ ಸಮಸ್ಯೆಯನ್ನು ತಂದೊಡ್ಡಬಹುದು. ಇದರಿಂದ ನಿಮ್ಮ ದಾಂಪತ್ಯ ಜೀವನ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳಾಗಬಹುದು. ದಯವಿಟ್ಟು ಇಂತಹ ತಪ್ಪು ನಿರ್ಧಾರಗಳನ್ನು ಮಾಡದೆ ನಿಮ್ಮ ಪತಿಯೊಂದಿಗೆ ನಿಮ್ಮ ಸಂಬಂಧವನ್ನು ಗಟ್ಟಿಯಾಗಸಲು ಪ್ರಯತ್ನಿಸಿ.