ಬೆಂಗಳೂರು : ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿಸುವ ವಿಚಾರ ರೈತರಿಗೆ ನೀಡಿದ್ದ ಆಶ್ವಾಸನೆ ಮರೆತ್ರಾ ಸಿಎಂ ಯಡಿಯೂರಪ್ಪ ಎಂಬ ಪ್ರಶ್ನೆ ಮೂಡಿದೆ.
ಫೆ.7ರಂದು 20 ಕ್ವಿಂಟಾಲ್ ತೊಗರಿ ಖರೀದಿಸುವ ಬಗ್ಗೆ ಬೀದರ್ ನಲ್ಲಿ ರೈತರಿಗೆ ಸಿಎಂ ಭರವಸೆ ನೀಡಿದ್ದರು. ಆದರೆ ಈವರೆಗೂ ಸರ್ಕಾರ ಅಧಿಕೃತ ಆದೇಶ ಹೊರಡಿಸದ ಹಿನ್ನಲೆಯಲ್ಲಿ 20 ಕ್ವಿಂಟಾಲ್ ತೊಗರಿಯನ್ನು ಖರೀದಿ ಮಾಡಲು ಸಿಬ್ಬಂದಿಗಳು ಹಿಂದೇಟು ಹಾಕಿದ್ದಾರೆ. ಇದರಿಂದ ತೊಗರಿ ಬೆಳೆಗಾರರು ಗೊಂದಲಕ್ಕೆ ಸಿಲುಕಿದ್ದಾರೆ.
1.85 ಲಕ್ಷ ಟನ್ ತೊಗರಿ ಖರೀದಿಗೆ ಮಾತ್ರ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈಗ ಹೆಚ್ಚುವರಿಯಾಗಿ ತೊಗರಿಯನ್ನು ಖರೀದಿ ಮಾಡಿದರೆ 4 ಲಕ್ಷ 15 ಸಾವಿರ ಟನ್ ತೊಗರಿ ಖರೀದಿಸಬೇಕಾಗುತ್ತದೆ. ಹೆಚ್ಚುವರಿ ತೊಗರಿ ಖರೀದಿಗೆ 2,500 ಕೋಟಿ ಅಗತ್ಯ. ಆದ್ರೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಿಗದ ಹಿನ್ನಲೆ ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ ಎನ್ನಲಾಗಿದೆ.