Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳಿಗೆ ವಿದ್ಯೆ ತಲೆಗೆ ಹತ್ತದಿರಲು ಯಾವ ದೋಷ ಕಾರಣ

Astrology

Krishnaveni K

ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2024 (08:39 IST)
ಬೆಂಗಳೂರು: ಕೆಲವೊಮ್ಮೆ ಮಕ್ಕಳು ಎಷ್ಟೇ ಓದಿದರೂ ಅವರಿಗೆ ತಲೆಹತ್ತುವುದಿಲ್ಲ ಎಂಬ ಚಿಂತೆ ಪೋಷಕರನ್ನು ಕಾಡುತ್ತದೆ. ಇದಕ್ಕೆ ಜಾತಕದಲ್ಲಿರುವ ಯಾವ ದೋಷ ಕಾರಣವಿರಬಹುದು ಎಂದು ಇಲ್ಲಿ ನೋಡೋಣ.

ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಬೇಕಾದರೆ ಕಠಿಣ ಪರಿಶ್ರಮದ ಜೊತೆಗೆ ದೈವಬಲವೂ ಬೇಕು. ಜಾತಕದಲ್ಲಿ ಐದನೇ ಮನೆಯನ್ನು ಶಿಕ್ಷಣದ ಮನೆ ಎಂದು ಪರಿಗಣಿಸಲಾಗುತ್ತದೆ. ನವಗ್ರಹಗಳ ಪೈಕಿ ಗುರು ಜ್ಞಾನದ ಅಂಶವಾದರೆ ಬುಧ ಬುದ್ಧಿವಂತಿಕೆಯ ಸಂಕೇತವಾಗಿದೆ. ಚಂದ್ರನು ಚಿತ್ತ ಚಾಂಚಲ್ಯ ಉಂಟು ಮಾಡುವವನು. ಹೀಗಾಗಿ ಈ ಮೂರೂ ಗ್ರಹಗಳು ಸರಿಯಾಗಿದ್ದರೆ ಮಾತ್ರ ಶಿಕ್ಷಣದಲ್ಲಿ ಪ್ರಗತಿ ಸಾಧ್ಯ.

ಅದೇ ರೀತಿ ಕಾಲಸರ್ಪದೋಷವಿದ್ದರೂ ಶಿಕ್ಷಣ ಅರ್ಧಕ್ಕೇ ಮೊಟಕುಗೊಳ್ಳುವ ಅಪಾಯವಿದೆ. ಚಂದ್ರನು ತನ್ನ ಮನೆಯಲ್ಲಿ ಕೂರದೇ ಇದ್ದಾಗ ಚಿತ್ತ ಚಾಂಚಲ್ಯವಾಗಿ ಶಿಕ್ಷಣದ ಕಡೆಗೆ ಗಮನ ಕೊಡಲು ಮನಸ್ಸಾಗದು. ಇದರಿಂದ ಶಾಲೆ ಮೊಟಕುಗೊಳಿಸುವ ಮನಸ್ಸು ಮಾಡುತ್ತಾರೆ.

ಇದಕ್ಕಾಗಿ ಕಾಲಸರ್ಪದೋಷವಿದ್ದರೆ ಅದನ್ನು ಪರಿಹರಿಸಿಕೊಂಡು ಬುಧವಾರಗಳಂದು ವಿದ್ಯಾಧಿಪತಿ ಗಣೇಶನ ಪೂಜೆ ಮಾಡುತ್ತಾ ಬಂದರೆ ಒಳ್ಳೆಯದು. ಅದೇ ರೀತಿ ಬುಧನು ದೋಷಪೂರಿತನಾಗಿದ್ದರೆ ಬುಧ ಗ್ರಹಶಾಂತಿ ಮಾಡಿಸಿದರೆ ಉತ್ತಮ. ಗುರು ದೋಷಗಳನ್ನು ಪರಿಹರಿಸಿಕೊಂಡರೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?