ಬೆಂಗಳೂರು: ವಾಸ್ತು ಪ್ರಕಾರ ಕೆಲವೊಂದು ಗಿಡಿಗಳು ನಿಮಗೆ ಮತ್ತು ಮನೆಗೆ ಒಳಿತುಂಟು ಮಾಡಿದರೆ ಮತ್ತೆ ಕೆಲವು ಗಿಡಗಳಿಂದ ನಿಮಗೆ ದರಿದ್ರ ಬರಬಹುದು. ಹಾಗಿದ್ದರೆ ಮನೆಯ ಮುಂಭಾಗ ಇರಬಾರದ ಗಿಡಗಳು ಯಾವುವು ನೋಡೋಣ.
ವಾಸ್ತು ಪ್ರಕಾರ ಮನೆಯ ಮುಂಭಾಗ ಕೆಲವೊಂದು ಗಿಡಗಳು ಇರುವುದರಿಂದ ಮನೆಗೆ ನೆಗೆಟಿವ್ ಎನರ್ಜಿ ಉಂಟಾಗುತ್ತದೆ. ಇದರಿಂದ ಮನೆಯಲ್ಲಿ ಕಲಹ, ಆರೋಗ್ಯ ಸಮಸ್ಯೆ, ನೆಮ್ಮದಿಗೆ ಭಂಗವಾಗಬಹುದು. ವಾಸ್ತು ಪ್ರಕಾರ ಕಳ್ಳಿ ಗಿಡ ಮನೆಯ ಮುಂಭಾಗದಲ್ಲಿ ನೆಡಬಾರದು ಎನ್ನುತ್ತಾರೆ.
ಕಳ್ಳಿ ಗಿಡವನ್ನು ಸ್ಮಶಾನ ಗಿಡ ಎಂದೂ ಕರೆಯತ್ತಾರೆ. ಇದು ಮನೆ ಎದುರು ಇದ್ದರೆ ಶುಭ ಸಂಕೇತವಲ್ಲ. ಹೀಗಾಗಿ ಇದನ್ನು ಮನೆಯ ಮುಂಭಾಗದಲ್ಲಂತೂ ನೆಡಲೇಬಾರದು. ಇದರಿಂದ ಮನೆಯಲ್ಲಿ ಕೆಟ್ಟ ಎನರ್ಜಿ, ದುಃಖವೇ ತುಂಬಿಕೊಂಡಿರುತ್ತದೆ ಎಂಬ ನಂಬಿಕೆಯಿದೆ.
ಅದೇ ರೀತಿ ಹತ್ತಿ ಗಿಡವೂ ಮನೆಯ ಮುಂಭಾಗ ನೆಡಬಾರದು. ಅಲಂಕಾರಿಕವಾಗಿ ಕೆಲವರು ಹತ್ತಿ ಗಿಡವನ್ನು ಮನೆಯ ಬಳಿ ಇಟ್ಟುಕೊಳ್ಳುತ್ತಾರೆ. ಆದರೆ ಇದು ಮುಂಭಾಗವಿದ್ದರೆ ಮನೆಗೆ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ಅದೇ ರೀತಿ ಬೊನ್ಸಾಯ್ ಗಿಡವನ್ನೂ ಮನೆ ಎದುರು ಇಟ್ಟುಕೊಳ್ಳಬಾರದು. ಇದರಿಂದ ನಿಮ್ಮ ಜೀವನದಲ್ಲಿ ಹಲವು ಅಲ್ಲೋಕಲ್ಲೋಲ ಘಟನೆಗಳು ನಡೆದು ಹೋದೀತು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.