Select Your Language

Notifications

webdunia
webdunia
webdunia
webdunia

ಗುರು ಗ್ರಹ ದೋಷ ನಿವಾರಣೆಗೆ ಏನು ಮಾಡಬೇಕು

Astrology

Krishnaveni K

ಬೆಂಗಳೂರು , ಗುರುವಾರ, 19 ಸೆಪ್ಟಂಬರ್ 2024 (08:43 IST)
ಬೆಂಗಳೂರು: ಗುರು ಗ್ರಹವನ್ನು ಮಾರ್ಗರ್ಶಕ ಎನ್ನುತ್ತೇವೆ. ಗುರುಗ್ರಹದ ಪ್ರಯೋಜನ ಪಡೆದರೆ ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲವೂ ನಮಗೆ ಸಿಗುತ್ತದೆ. ಒಂದು ವೇಳೆ ಜಾತಕದಲ್ಲಿ ಗುರು ದೋಷವಿದ್ದರೆ ಯಾವ ಪೂಜೆ ಮಾಡಬೇಕು ಇಲ್ಲಿ ನೋಡಿ.

ಜಾತಕದಲ್ಲಿ ಗುರು ದೋಷವಿದ್ದಾಗ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗಬಹುದು. ವಿಶೇಷವಾಗಿ ಮದುವೆಯಾಗಲು ವಿಳಂಬವಾಗುವುದು, ಮಕ್ಕಳಾಗಲು ಸಮಸ್ಯೆ, ಹೆರಿಗೆಯಲ್ಲಿ ಸಮಸ್ಯೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳಿವೆ.

ಜಾತಕದಲ್ಲಿ ಗುರು ದೋಷವಿದ್ದಾಗ ಅದನ್ನು ಪರಿಹರಿಸಲು ಕೆಲವೊಂದು ದಾರಿಗಳಿವೆ. ಗುರುವಿನ ಅನುಗ್ರಹ ಪಡೆಯಲು ಗುರುವಾರ ಮಹಾವಿಷ್ಣುವಿನ ಪೂಜೆ ಮಾಡುವುದು ಅಗತ್ಯ. ಅದೇ ರೀತಿ ಗುರುವಾರಗಳಂದು ಬ್ರಾಹ್ಮಣರಿಗೆ ಭೋಜನ ನೀಡಿ ಅವರ ಆಶೀರ್ವಾದ ಪಡೆದರೆ ಉತ್ತಮ.

ಗುರುವಾರ ದಿನ ಮಹಾವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ನೀಡಿ ಕಡಲೆಬೇಳೆಯನ್ನು ದಾನ ಮಾಡುವುದು ಉತ್ತಮ. ಗುರು ದೋಷವನ್ನು ನಿವಾರಿಸಲು ‘ಓಂ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನು ಪಠಿಸುತ್ತಿರಿ. ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದಲೂ ಗುರು ದೋಷ ನಿವಾರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?