ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಮದುವೆ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ತಾಳಿ ಕಟ್ಟುವ ಶಾಸ್ತ್ರವಿರುತ್ತದೆ. ಯಾವಾಗ ವರ ವಧುವಿನ ಕೊರಳಿಗೆ ತಾಳಿ ಕಟ್ಟುತ್ತಾನೋ ಆವಾಗ ಅವರಿಬ್ಬರು ಗಂಡಹೆಂಡತಿಯಾಗುತ್ತಾರೆ. ವರ ವಧುವಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ. ಎಲ್ಲರೂ ಅವರನ್ನು ಆಶೀರ್ವದಿಸುತ್ತಾರೆ. ಆದರೆ ಯಾರಿಗೂ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಯಾಕೆ ಹಾಕುತ್ತಾರೆಂದು ಎಂಬುದು ತಿಳಿದಿರುವುದಿಲ್ಲ.
ಮೂರು ಗಂಟುಗಳ ಬಂಧನದಿಂದ ಒಂದಾದ ಯುವಜೋಡಿ ಒಟ್ಟಾಗಿ ನೂರು ವರ್ಷಗಳ ಕಾಲ ಬಾಳ ಬೇಕೆಂದು ಪಂಡಿತರು, ಹಿರಿಯರು ಆಶೀರ್ವದಿಸುತ್ತಾರೆ. ಹಾಗಾದ್ರೆ ಆ ಮೂರು ಗಂಟಿನ ಅರ್ಥವೇನೆಂಬುದು ಇಲ್ಲಿದೆ ನೋಡಿ.
ಧರ್ಮೇಚ - ಅಂದರೆ ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ .
ಅರ್ಥೇಚ – ಅಂದರೆ ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ.
ಕಾಮೇಚ - ಅಂದರೆ ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ತೀರಿಸಿಕೊಳ್ಳುತ್ತೇನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ