ಬೆಂಗಳೂರು : ದೇವರಿಗೆ ತಲೆಕೂದಲನ್ನು ಅರ್ಪಿಸಿಕೊಳ್ಳುವುದು ಸಾಂಪ್ರದಾಯಿಕವಾಗಿ ಬಂದ ಒಂದು ಆಚಾರ. ಕೆಲವು ಹಿಂದೂ ದೇವಾಲಯಗಳಲ್ಲಿ ಈ ಶಾಸ್ತ್ರಗಳನ್ನು ಆಚರಿಸುತ್ತಾರೆ. ಹೆಚ್ಚಾಗಿ ಚಿಕ್ಕಮಕ್ಕಳಿಗೆ ಮೊದಲಬಾರಿಗೆ ಕೂದಲು ತೆಗೆಯುವ ಶಾಸ್ತ್ರವನ್ನು ದೇವಸ್ಥಾನಗಳಲ್ಲಿ ಮಾಡುತ್ತಾರೆ. ಇದಕ್ಕೆ ಕಾರಣವೇನು ಎಂಬುದು ಇಲ್ಲಿದೆ.
ತಲೆಯ ಕೂದಲು ಪಾಪಗಳಿಗೆ ನಿಲಯವೆಂದು ಪುರಾಣಗಳು ಹೇಳುತ್ತವೆ. ಅವುಗಳನ್ನು ತೊಲಗಿಸುವುದು ಪಾಪಗಳನ್ನು ತೊಲಗಿಸುವುದಕ್ಕೆ ಸಮಾನವಾದದ್ದು. ಗರ್ಭದಲ್ಲಿರುವ ಶಿಶು ಸಹಾ ತಲೆಯ ಮೂಲಕವೇ ಭೂಮಿಗೆ ಬರುತ್ತದೆ. ಈ ಶಿಶುವಿನ ಕೂದಲಲ್ಲಿ ಪೂರ್ವಜನ್ಮಕ್ಕೆ ಸಂಬಂಧಿಸಿದ ಅನೇಕ ಪಾಪಗಳಿರುತ್ತವೆ. ಆದ್ದರಿಂದಲೇ ಚಿಕ್ಕ ವಯಸ್ಸಿನಲ್ಲಿಯೇ ತಲೆಕೂದಲು ಅರ್ಪಿಸುವ ಕಾರ್ಯಕ್ರಮವನ್ನು ನಡೆಸುತ್ತಾರೆ. ಕೂದಲಲ್ಲಿ ಪಾಪಗಳಿರುವುದರಿಂದಲೇ ‘ಶಿರೋಗತಾನಿ ಪಾಪಾನಿ’ ಎನ್ನುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ