Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊದಲ ರಾತ್ರಿಯಂದು ಸತಿ ಪತಿಗಳು ಯಾವಾಗ ಮಿಲನಕ್ರಿಯೆ ನಡೆಸಿದರೆ ಒಳ್ಳೆಯದು ಗೊತ್ತಾ…?

ಮೊದಲ ರಾತ್ರಿಯಂದು ಸತಿ ಪತಿಗಳು ಯಾವಾಗ ಮಿಲನಕ್ರಿಯೆ ನಡೆಸಿದರೆ ಒಳ್ಳೆಯದು ಗೊತ್ತಾ…?
ಬೆಂಗಳೂರು , ಶುಕ್ರವಾರ, 9 ಮಾರ್ಚ್ 2018 (06:25 IST)
ಬೆಂಗಳೂರು : ನಮ್ಮ ಹಿರಿಯರು ಮದುವೆ ಆದ ನಂತರ ದಂಪತಿಗಳ ಮೊದಲ ರಾತ್ರಿಗೆ ಒಳ್ಳೆಯ ಮುಹೂರ್ತ ನೋಡುತ್ತಿದ್ದರು . ಅದರಂತೆ ಪ್ರಸ್ತ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಏಕೆಂದರೆ ಒಳ್ಳೆಯ ಮುಹೂರ್ತದಲ್ಲಿ ದಂಪತಿಗಳು ಸೇರಿದರೆ ಅವರ ದಾಂಪತ್ಯ ಜೀವನ ಸುಖಮಯವಾಗಿರುವುದಲ್ಲದೇ ಅವರಿಗೆ ಜನಿಸುನ ಮಕ್ಕಳು ಕೂಡ ಸದ್ಗಣ ಸಂಪನ್ನರಾಗಿರುತ್ತಾರೆ  ಎಂಬುದು ಹಿರಿಯರ ನಂಬಿಕೆ. ಅದಕ್ಕಾಗಿ ದಂಪತಿಗಳು ಯಾವ ಸಮಯದಲ್ಲಿ ಸೇರಿದರೆ ಒಳ್ಳೆಯದು ,ಯಾವ ಸಮಯದಲ್ಲಿ ಸೇರಬಾರದು ಎಂಬುದಕ್ಕೆ ಇಲ್ಲಿದೆ ಮಾಹಿತಿ.


ದಂಪತಿಗಳು ಕೋಪದಿಂದ ಇರುವಾಗ ಸೇರಬಾರದು ಎಂಬುದಕ್ಕೆ ನರಕಾಸುರನ ಜನನ ನಮಗೆ ಒಂದು ಉದಾಹರಣೆ. ಹಾಗೇ ಹಗಲು ವೇಳೆ ಸೇರಿದರೆ ದುಷ್ಟ ಮಕ್ಕಳ ಜನನ ಆಗುತ್ತದೆ ಎಂಬುದಕ್ಕೆ ರಾವಣನ ಉದಾಹರಣೆ ಇದೆ.


ಆದಕಾರಣ ದಂಪತಿಗಳು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ಸೇರಿದರೆ ಉತ್ತಮ. ಹಾಗೇ ಪತ್ನಿ ಮುಟ್ಟಾದ ಮೊದಲ ನಾಲ್ಕು ರಾತ್ರಿ ಸೇರಬಾರದು. 11, 13, 16ನೇ ರಾತ್ರಿ ಸೇರಬಾರದು. ವೈಜ್ಞಾನಿಕವಾಗಿ ಹೇಳುವುದಾದರೂ 12, 14, 15ನೇ ರಾತ್ರಿಗಳಲ್ಲಿ ಸೇರಿದರೆ ಉತ್ತಮ. ಆ ದಿನ ಬೆಳಗ್ಗೆ ದಂಪತಿ ದೇವಸ್ಥಾನಕ್ಕೆ ತೆರಳಿ ಸತ್ಸಂತಾನಕ್ಕಾಗಿ ಪ್ರಾರ್ಥಿಸಬೇಕು ಎಂದು ಹಿರಿಯರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ನಲ್ಲಿ ಅಧಿಕ ಸುಖ ಬೇಕೆನಿಸಿದರೆ ಹೀಗೆ ಮಾಡಿ!