Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆ ದಿನ ಸಪ್ತಪದಿ ಯಾಕೆ ತುಳಿಯುತ್ತಾರೆ ಗೊತ್ತಾ...?

ಮದುವೆ ದಿನ ಸಪ್ತಪದಿ ಯಾಕೆ ತುಳಿಯುತ್ತಾರೆ ಗೊತ್ತಾ...?
ಬೆಂಗಳೂರು , ಶನಿವಾರ, 17 ಮಾರ್ಚ್ 2018 (06:15 IST)
ಬೆಂಗಳೂರು : ನಮ್ಮ ಹಿಂದೂಧರ್ಮದಲ್ಲಿ ಮದುವೆ ದಿನದಂದು ಸಪ್ತಪದಿ ತುಳಿಯುವ ಶಾಸ್ತ್ರವಿದೆ. ಈ ಸಪ್ತಪದಿ ತುಳಿಯುವುದರ ಅರ್ಥ ಸಂಗಾತಿಯೊಂದಿಗೆ ಏಳು ಜನ್ಮಗಳವರೆಗೂ ಜೊತೆಯಾಗಿರುತ್ತೇನೆ ಎಂಬ ನಂಬಿಕೆಯನ್ನು ಹುಟ್ಟಿಸಲು ಎಂದು ಹೇಳುತ್ತಾರೆ. ಈ ಏಳು ಹೆಜ್ಜೆಗೂ ಒಂದೊಂದು ಅರ್ಥವಿದೆ.


*ಮೊದಲನೆ ಹೆಜ್ಜೆ : ಅನ್ನ ವೃದ್ಧಿಗೆ. ಬೇಸಾಯ ನಮ್ಮ ಜೀವನಾಧಾರವಾಗಿರುವುದರಿಂದ ಒಳ್ಳೆಯ ಬೆಳೆ ಬೆಳೆಯಲೆಂದು ಆಶಿಸುತ್ತಾ ಮೊದಲನೇ ಹೆಜ್ಜೆ ಯನ್ನು ಹಾಕುವುದು.
*ಎರಡನೆ ಹೆಜ್ಜೆ : ಬಲ ವೃದ್ಧಿಗೆ. ನೂತನ ವಧೂವರ ರೊಂದಿಗೆ ಎರಡೂ ಕುಟುಂಬಗಳು ಆಯುರಾರೋಗ್ಯದಿಂದ ಇರಲೆಂದು.
*ಮೂರನೆ ಹೆಜ್ಜೆ : ಧನ ಪ್ರಾಪ್ತಿಯಾಗಲೆಂದು.
*ನಾಲಕ್ಕನೆ ಹೆಜ್ಜೆ : ಗಂಡ ಹೆಂಡಿರಲ್ಲಿ ಸುಖ ಸಂತೋಷಗಳು ಸದಾಕಾಲ ತುಂಬಿ ತುಳುಕಲೆಂದು.
*ಐದನೆ ಹೆಜ್ಜೆ : ಇತರರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ.
*ಆರನೆ ಹೆಜ್ಜೆ : ದಾಂಪತ್ಯ ಜೀವನದಲ್ಲಿ ಕಲಹಗಳು,ಅನುಮಾನಗಳು ಬಾರದೆ ಸುಗಮವಾಗಿ ಸಾಗಲೆಂದು.
*ಏಳನೆ ಹೆಜ್ಜೆಶಾರೀರಕವಾಗಿ,ಮಾನಸಿಕವಾಗಿ ಸದೃಢವಾದ ಸಂತಾನವನ್ನು ಕರುಣಿಸೆಂದು ಅಗ್ನಿ ದೇವರನ್ನು ಪ್ರಾರ್ಥಿಸುತ್ತಾ ಹಾಕುವ ಹೆಜ್ಜೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಕಾಜಲ್ ಅಗರ್ವಾಲ್ ಅವರಿಗೆ ಪ್ರಧಾನಿ ಮೋದಿ ಅವರು ಪತ್ರ ಬರೆದದ್ದಾದರೂ ಯಾಕೆ ಗೊತ್ತಾ…?