ಬೆಂಗಳೂರು: ಮನೆಗೆ ಹಾಕುವ ಬಣ್ಣ ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಮನೆಯ ವಾಸ್ತು ಸರಿಯಿದ್ದರೆ, ಮನೆಯವರ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೂ ಆರ್ಥಿಕ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಆರೋಗ್ಯ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಮನೆಯ ಗೋಡೆಗಳಿಗೆ ಸರಿಯಾದ ಬಣ್ಣವನ್ನು ಬಳಿಯಿರಿ.
ಅಡುಗೆ ಒಲೆಯು ಪೂರ್ವ ಇಲ್ಲವೇ ಆಗ್ನೇಯ ದಿಕ್ಕಿನಲ್ಲಿ ಇರುವಂತೆ ವ್ಯವಸ್ಥೆ ಮಾಡಿ. ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನ ಕಡೆಗಿರಬೇಕು.
ನೈಋತ್ಯ ಕಿಟಕಿಗಳ ಬದಲಿಗೆ ಉತ್ತರ ಮತ್ತು ಪೂರ್ವದ ಕಿಟಕಿಗಳನ್ನು ತೆರೆದಿಡುವುದು ಒಳ್ಳೆಯದು. ಇದರಿಂದ ಸಂತೋಷ, ಆರೋಗ್ಯ ಮತ್ತು ಕೌಟುಂಬಿಕ ಸಾಮರಸ್ಯ ಉಂಟಾಗುತ್ತದೆ.
ಅಡುಗೆ ಮಾಡುವಾಗ, ತಿನ್ನುವಾಗ ಅಥವಾ ಕುಡಿಯುವಾಗ ಉತ್ತರ ದಿಕ್ಕಿನತ್ತ ಮುಖ ಮಾಡಬೇಡಿ. ಉತ್ತಮ ರುಚಿ, ಜೀರ್ಣಶಕ್ತಿ ಮತ್ತು ಆರೋಗ್ಯಕರ ದೇಹಕ್ಕಾಗಿ ಪೂರ್ವದ ಕಡೆ ಮುಖ ಮಾಡುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ