Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೋಳಿ ಹಬ್ಬದ ವಿಶೇಷ ರುಚಿ - ಥಂಡಾಯಿ

ಹೋಳಿ ಹಬ್ಬದ ವಿಶೇಷ ರುಚಿ - ಥಂಡಾಯಿ

ಅತಿಥಾ

ಬೆಂಗಳೂರು , ಗುರುವಾರ, 1 ಮಾರ್ಚ್ 2018 (18:27 IST)
ಹೋಳಿ ಹಬ್ಬ ಹತ್ತಿರ ಬರುತ್ತಿದೆ, ನಿಮ್ಮ ಅತಿಥಿಗಳನ್ನು ಈ ಬಾರಿ ವಿಶೇಷವಾದ ಥಂಡಾಯಿ ನೀಡಿ ಸತ್ಕರಿಸಿ. ಇದು ಎಷ್ಟು ರುಚಿಕರವಾಗಿರುತ್ತದೆಯೋ ಅಷ್ಟೇ ಆರೋಗ್ಯಕರ ಕುಡ ಹೌದು. ಬನ್ನಿ ಥಂಡಾಯಿ ಮಾಡುವುದು ಹೇಗೆ ಎಂದು ತಿಳಿಯೋಣ.
 
ಬೇಕಾಗುವ ಸಾಮಗ್ರಿಗಳು
1/4 ಕಪ್ ಗೋಡಂಬಿ
1/4 ಕಪ್ ಬಾದಾಮಿ
2 ಚಮಚ ಗಸಗಸೆ
2 ಚಮಮ ಕಲ್ಲಂಗಡಿ ಬೀಜಗಳು
1 ಚಮಚ ಸೋಂಪು
1 ಚಮಚ ಕಾಳುಮೆಣಸು
3-4 ಎಲಕ್ಕಿ
1-2 ಚಮಚ ಒಣಗಿದೆ ಗುಲಾಬಿ ದಳಗಳು
1/4 ಕಪ್ ಸಕ್ಕರೆ
2-3 ಚಿಟಿಕೆ ಕೇಸರಿ ದಳ
2 ಕಪ್ ತಣ್ಣಗಾಗಿಸಿದ ಹಾಲು
ಮಾಡುವ ವಿಧಾನ
* ಒಂದು ಮಿಕ್ಸಿ ಜಾರ್‌ನಲ್ಲಿ ಹಾಲನ್ನು ಹೊರತುಪಡಿಸಿ ಎಲ್ಲವನ್ನೂ ಹಾಕಿ ನೀರು ಸೇರಿಸದೇ ಪುಡಿ ಮಾಡಿಟ್ಟುಕೊಳ್ಳಿ.
* ಒಂದು ಗ್ಲಾಸ್‌ನಲ್ಲಿ 3-4 ಐಸ್ ತುಂಡುಗಳು, 2 ಚಮಚ ಪುಡಿ ಮಾಡಿದ ಮಿಶ್ರಣ, 1 ಕಪ್ ತಣ್ಣಗಾಗಿಸಿದ ಹಾಲನ್ನು ಹಾಕಿ ಸವಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಪಲ್ ತಿನ್ನಲು ಬೆಸ್ಟ್ ಟೈಮ್ ಯಾವುದು?