ಬೆಂಗಳೂರು: ಆಯುರ್ವೇದದ ಪ್ರಕಾರ ಯಾವುದೇ ಆಹಾರ ಸೇವಿಸಬೇಕಾದರೂ ನಿರ್ದಿಷ್ಟ ಸಮಯವಿರುತ್ತದೆ. ಹಾಗಿದ್ದರೆ ಮಾತ್ರ ಅದು ನಮ್ಮ ದೇಹಕ್ಕೆ ಒಗ್ಗಿಕೊಳ್ಳುತ್ತದೆ.
ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಆಂಗ್ಲ ಗಾದೆ ಮಾತಿದೆ. ಸೇಬು ಹಣ್ಣಿನಲ್ಲಿ ಅಷ್ಟೊಂದು ಪೋಷಕಾಂಶಗಳಿವೆ ಎನ್ನುವ ಕಾರಣಕ್ಕೆ ಈ ಮಾತು ಹೇಳಲಾಗಿದೆ.
ಆದರೆ ಸೇಬು ತಿನ್ನಲ್ಲೂ ನಿರ್ದಿಷ್ಟ ಸಮಯವಿದೆ. ಆಯುರ್ವೇದದ ಪ್ರಕಾರ ಬೆಳಗಿನ ಅವಧಿಯಲ್ಲಿ ಸೇಬು ಸೇವಿಸಿದರೆ ಅದರ ಫಲ ದೇಹಕ್ಕೆ ಸಿಗುತ್ತದೆ. ಯಾಕೆಂದರೆ ಇದರಲ್ಲಿ ಫೈಬರ್, ಸೇರಿದಂತೆ ಜೀರ್ಣಕ್ರಿಯೆಗೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಹೀಗಾಗಿ ಇದನ್ನು ಬೆಳಗೆ ಸೇವಿಸಿದರೆ ಉತ್ತಮ ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ