ಬೆಂಗಳೂರು: ಓರ್ವ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಮಾಡುವ ಕೆಲವೊಂದು ತಪ್ಪುಗಳಿಂದ ಶ್ರೀಮಂತಿಕೆ ಕಳೆದುಕೊಂಡು ದಾರಿದ್ರ್ಯ ಅನುಭವಿಸಬೇಕಾಗಬಹುದು. ಕೆಲವೊಂದು ಹೊತ್ತಿನಲ್ಲಿ ಹಣಕಾಸಿನ ವ್ಯವಹಾರ ಮಾಡುವುದರಿಂದ ನಿಮಗೆ ಹಣಕಾಸಿನ ಸಂಕಷ್ಟಗಳು ತಪ್ಪಿದ್ದಲ್ಲ.
ಲಕ್ಷ್ಮೀ ದೇವಿ ಸಂತುಷ್ಟಳಾದರೆ ನಮಗೆ ಹಣಕಾಸಿನ ಯಾವುದೇ ಸಮಸ್ಯೆಗಳು ಬಾರದು. ಆದರೆ ಅದೇ ಲಕ್ಷ್ಮೀಗೆ ಇಷ್ಟವಾಗದ ಕೆಲಸಗಳನ್ನು ಮಾಡುವುದರಿಂದ ಆಕೆಯ ಕೋಪಕ್ಕೆ ಗುರಿಯಾಗಬೇಕಾದೀತು. ಇದರಿಂದ ಹಣಕಾಸಿನ ಕಷ್ಟ-ನಷ್ಟಗಳು ಬಂದೀತು. ಹೀಗಾಗಿ ಹಣದ ವಿಚಾರದಲ್ಲಿ ಕೆಲವೊಂದು ಎಚ್ಚರಿಕೆ ವಹಿಸುವುದು ಉತ್ತಮ
ರಾತ್ರಿ ಊಟದ ಬಳಿಕ ಹಣ ವ್ಯವಹಾರ ಬೇಡ
ರಾತ್ರಿ ಊಟವಾದ ಬಳಿಕ ಯಾವುದೇ ಹಣದ ವ್ಯವಹಾರವಿಟ್ಟುಕೊಳ್ಳಬಾರದು. ಯಾರಿಗಾದರೂ ಸಾಲ ಕೊಡುವುದು, ಹಣ ದಾನ ಮಾಡುವುದು ಅಥವಾ ಹಣಕಾಸಿನ ಲೆಕ್ಕಾಚಾರ ಮಾಡುವುದು ಇತ್ಯಾದಿ ಕೆಲಸಗಳನ್ನು ರಾತ್ರಿ ಊಟದ ಬಳಿಕ ಮಾಡಲೇಬಾರದು. ಇದರಿಂದ ದಾರಿದ್ರ್ಯ ಬರಬಹುದು
ಊಟದ ಮಧ್ಯೆ ಏಳಬಾರದು
ಊಟ ಮಾಡುವಾಗ ಮಧ್ಯೆ ಎದ್ದು ಹೋಗುವುದರಿಂದ ಲಕ್ಷ್ಮೀ ದೇವಿಯ ಅವಕೃಪೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಹಣಕಾಸಿನ ಸಮಸ್ಯೆಗಳು ಬಂದೀತು. ಹೀಗಾಗಿ ಊಟ ಪೂರ್ತಿ ಮಾಡಿದ ಬಳಿಕವೇ ನಿಮ್ಮ ವ್ಯವಹಾರಗಳನ್ನಿಟ್ಟುಕೊಳ್ಳಿ.
ಖಾಲಿ ಕೈಯಲ್ಲಿ ಉಪ್ಪು ಕೊಡಬೇಡಿ
ಕೆಲವರು ಉಪ್ಪು ಕೇಳಿದಾಗ ಖಾಲಿ ಕೈಯಲ್ಲಿ ಕೊಡುತ್ತಾರೆ ಮತ್ತು ಅದನ್ನು ತೆಗೆದುಕೊಳ್ಳುವವರೂ ಖಾಲಿ ಕೈಯಲ್ಲಿ ತೆಗೆದುಕೊಳ್ಳುತ್ತಾರೆ. ಇದರಿಂದ ಲಕ್ಷ್ಮೀ ದೇವಿಯ ಅವಕೃಪೆಗೊಳಗಾಗಬೇಕಾದೀತು.