ಬೆಂಗಳೂರು : ಪ್ರಕೃತಿಯ ನಮಗೆ ನೀಡಿರುವ ಅಮೂಲ್ಯ ಕೊಡುಗೆ ಎಂದರೆ ಮಣ್ಣು. ವಾಸ್ತುಶಾಸ್ತ್ರದ ಪ್ರಕಾರ ಮಣ್ಣಿನ ಉಪಯೋಗದಿಂದ ಸುಖ-ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯಶಾಸ್ತ್ರ ಹಾಗೂ ಗ್ರಂಥಗಳಲ್ಲಿಯೂ ಮಣ್ಣಿನ ಮಹತ್ವದ ಬಗ್ಗೆ ಹೇಳಲಾಗಿದೆ.
*ಮನೆಯಲ್ಲಿ ಮಣ್ಣಿನ ಪಾತ್ರೆಯಿದ್ದರೆ ಬುಧ ಹಾಗೂ ಚಂದ್ರನ ಆಶೀರ್ವಾದ ಸದಾ ಇರುತ್ತದೆ. ಮನೆಯಲ್ಲಿರುವ ಕೆಲವೊಂದು ಮಣ್ಣಿನ ವಸ್ತುಗಳು ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಸಹಕಾರಿ.
*ದೇವರ ಮನೆಯಲ್ಲಿ ಮಣ್ಣಿನಿಂದ ಮಾಡಿದ ಮೂರ್ತಿಯನ್ನಿಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.
*ಮನೆಯ ವಾತಾವರಣವನ್ನು ಸಕಾರಾತ್ಮಕಗೊಳಿಸಲು ಮಣ್ಣಿನಿಂದ ಮಾಡಿದ ಪಕ್ಷಿಯ ಮೂರ್ತಿಯನ್ನು ಈಶಾನ್ಯ ದಿಕ್ಕಿನಲ್ಲಿಡಿ.
*ಪ್ರತಿದಿನ ಶುದ್ಧ ಹಸುವಿನ ತುಪ್ಪ ಹಾಕಿ ಮಣ್ಣಿನಿಂದ ಮಾಡಿದ ಹಣತೆಯಲ್ಲಿ ದೀಪ ಹಚ್ಚಿ. ದೇವತೆಗಳ ಕೃಪೆ ಸದಾ ನೆಲೆಸಿರುತ್ತದೆ.
*ಸಂಸಾರದಲ್ಲಿ ಸಮಸ್ಯೆ ಶುರುವಾಗಿದ್ದರೆ ತುಳಸಿ ಮುಂದೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ