ಬೆಂಗಳೂರು: ಹಿಂದಿನ ಕಾಲದಿಂದಲೂ ಕೆಲವೊಂದು ಆಚರಣೆಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ. ಆದರೆ ಈಗಿನವರು ಆದನ್ನೆಲ್ಲ ಗಾಳಿಗೆ ತೂರಿ ತಮಗೆ ಅನಿಸಿದ್ದನ್ನು ಮಾಡುತ್ತಾರೆ. ಹಿರಿಯರು ಮಾಡಿರುವ ಕೆಲವೊಂದು ಸಂಪ್ರದಾಯ, ಆಚರಣೆಗಳು ನಮ್ಮ ಬದುಕಿನ ಸಮಸ್ಯೆಗಳನ್ನು ದೂರ ಮಾಡಲು ದಾರಿಯಾಗಿರುತ್ತದೆ. ಇವುಗಳನ್ನು ಪಾಲಿಸುವುದರಿಂದ ಸಮಸ್ಯೆಗಳಿಂದ ಮುಕ್ತಿ ಪಡೆದು ನೆಮ್ಮದಿಯಾಗಿರಬಹುದು. ಅವುಗಳು ಯಾವುವು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಮನೆಯ ಎದುರು ತುಳಸಿ ಕಟ್ಟೆ ಇದ್ದರೆ, ಮನೆಗೆ ಅದು ಶೋಭೆ. ಪ್ರತಿದಿನ ತುಳಸಿಯ ಬಳಿ ದೀಪ ಹಚ್ಚಿ ಇಡಬೇಕು. ಹೀಗೆ ಮಾಡಿದರೆ ಮನೆಯಲ್ಲಿ ಸುಖ ಸಮೃದ್ಧಿ ವೃದ್ಧಿಯಾಗುತ್ತದೆ. ತುಳಸಿಗೆ ಬೆಳಗ್ಗಿನ ವೇಳೆ ನೀರನ್ನು ಹಾಕಬೇಕು. ಜೊತೆಗೆ ಸಂಜೆಯ ಹೊತ್ತು ತುಳಸಿಯನ್ನು ಮುಟ್ಟಬಾರದು.
ಸಂಜೆ ಅಥವಾ ರಾತ್ರಿ ಉಗುರು ಕತ್ತರಿಸಬೇಡಿ. ರಾತ್ರಿ ಉಗುರು ಕತ್ತರಿಸಿದರೆ ಮನೆಯಿಂದ ಲಕ್ಷ್ಮೀ ದೇವಿ ಹೊರ ಹೋಗುತ್ತಾಳೆ ಅಲ್ಲದೆ ಬಡತನ ಆವರಿಸುತ್ತೆ ಎಂದು ಹೇಳಲಾಗುತ್ತದೆ.
ಸಂಜೆಯ ಹೊತ್ತು ಮನೆಯನ್ನು ಗುಡಿಸಬಾರದು. ಹೀಗೆ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಆವರಿಸುತ್ತದೆ. ಅಲ್ಲದೆ ಮನೆಯಲ್ಲಿ ದಾರಿದ್ರ್ಯತೆ ತಾಂಡವವಾಡುತ್ತದೆ.
ಕೆಲವರಿಗೆ ಸಂಜೆ ವೇಳೇ ಮಲಗುವ ಅಭ್ಯಾಸವಿರುತ್ತದೆ. ಇದು ಕೂಡ ಕೆಟ್ಟದ್ದು. ಇದರಿಂದ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತದೆ ಹಾಗೂ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ