Publish Date: Sun, 23 Aug 2020 (09:36 IST)
Updated Date: Sun, 23 Aug 2020 (09:43 IST)
ಬೆಂಗಳೂರು : ದೇವರಿಗೆ ಪೂಜೆ ಮಾಡುವಾಗ ನಾವು ಹೂಗಳನ್ನು ಹಾಕುತ್ತೇವೆ. ಆದಕಾರಣ ಹೂವಿನ ಗಿಡಗಳನ್ನು ಮನೆಯಲ್ಲೇ ಬೆಳೆಸುತ್ತೇವೆ. ಆದರೆ ಈ ಹೂವೊಂದು ದೇವರಿಗೆ ಪ್ರಿಯವಾದರೂ ಅದನ್ನು ಮನೆಯಲ್ಲಿ ಬೆಳೆಸುವಂತಿಲ್ಲ. ಅದು ಯಾವುದು ಗೊತ್ತಾ?
ಬಿಳಿ ಎಕ್ಕ ಗಿಡದ ಹೂ ದೇವರಿಗೆ ಬಹಳ ಪ್ರಿಯ. ಆದರೆ ಈ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಯಬಾರದಂತೆ. ಇದರಿಂದ ಆ ಮನೆಯನ್ನು ಸಂಪತ್ತು ಅಧಿಕವಾಗಿದ್ದರೂ ಕೂಡ ಮನೆಯಲ್ಲಿ ಅಶಾಂತಿ ತುಂಬಿರುತ್ತದೆ. ಏಕೆಂದರೆ ಬಿಳಿ ಎಕ್ಕ ಪರಶಿವನ ಅಂಶ. ಇದನ್ನು ಮನೆಯಲ್ಲಿ ನೆಟ್ಟರೆ ಬಹಳ ಪೂಜ್ಯನೀಯ ಭಾವನೆಯಿಂದ ನೋಡಿಕೊಳ್ಳಬೇಕು. ಈ ನಿಯಮದಲ್ಲಿ ಪ್ರಮಾದವಾದರೆ ಅದರ ಪರಿಣಾಮವನ್ನು ನಾವು ಎದುರಿಸಬೇಕಾಗುತ್ತದೆ.