Publish Date: Sat, 22 Aug 2020 (11:40 IST)
Updated Date: Sat, 22 Aug 2020 (11:42 IST)
ಬೆಂಗಳೂರು : ಅರಸೀಕೆರೆ ಟಿಕೆಟ್ ಗಾಗಿ ಸಿಎಂ ಶಿಷ್ಯರು ಕಿತ್ತಾಟ ಶುರು ಮಾಡಿದ್ದಾರೆ. ಸಿಎಂ ಆಪ್ತರಾದ ಮರೀಸ್ವಾಮಿ ಮತ್ತು ಸಂತೋಷ್ ಮಧ್ಯೆ ಫೈಟ್ ಶುರುವಾಗಿದೆ.
ಅರಸೀಕೆರೆ ಕ್ಷೇತ್ರಕ್ಕೆ ಬಿಎಸ್ ವೈ ಆಪ್ತ , ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಎಂಟ್ರಿ ಕೊಟ್ಟಿದ್ದು ಕ್ಷೇತ್ರದ ಮೇಲೆ ಎನ್.ಆರ್.ಸಂತೋಷ್ ಕಣ್ಣು ಹಾಕಿದ್ದಾರೆ ಎನ್ನಲಾಗಿದೆ. ಮೊನ್ನೆ ಹುಟ್ಟುಹಬ್ಬ ಆಚರಿಸಿದ್ದ ಸಂತೋಷ್ ಅರಸೀಕೆರೆಯಲ್ಲಿ ಬ್ಯಾನರ್ ಹಾಕಿಸಿದ್ದು, ಇದೀಗ ಬೆಂಗಳೂರು ಗ್ರಾಂ.ಪಂ.ಅಧ್ಯಕ್ಷ ಮರಿಸ್ವಾಮಿ ಬ್ಯಾನರ್ ಹರಿಸಿದ್ದಾರೆ ಎಂದು ಆರೋಪಿಸಿ ಮರೀಸ್ವಾಮಿ ವಿರುದ್ಧ ಸಂತೋಷ್ ಸಿಎಂ ಗೆ ದೂರು ನೀಡಿದ್ದಾರೆ.
ಮುಂದಿನ ಬಾರಿ ಮರಿಸ್ವಾಮಿಗೆ ಟಿಕೆಟ್ ಬೇಡ. ಲಿಂಗಾಯುತರ ಮಧ್ಯೆ ಒಡೆದು ಆಳುತ್ತಿದ್ದಾರೆ. ಮರಿಸ್ವಾಮಿ ಹಿಂಬಾಲಕರು ದೌರ್ಜನ್ಯ ಎಸಗುತ್ತಿದ್ದಾರೆ. ಮರಿಸ್ವಾಮಿಯನ್ನ ನಿಯಂತ್ರಿಸಿ ಎಂದು ವೀರಶೈವ ಸೇನೆ ಸಂಘಟನೆಯಿಂದ ಸಿಎಂಗೆ ದೂರು ನೀಡಲಾಗಿದೆ.