ಬೆಂಗಳೂರು : ಹಿಂದೂ ಸಂಪ್ರದಾಯದ ಪ್ರಕಾರ ನಡೆಯುವ ಮದುವೆಗಳಲ್ಲಿ,ಮದುಮಗಳ ಕೈಯಲ್ಲಿ ತೆಂಗಿನಕಾಯಿ ( ಎಳನೀರು) ಇರುವುದನ್ನು ಹೆಚ್ಚಿನವರು ಗಮನಿಸಿರುತ್ತಾರೆ. ಹಾಗಾದ್ರೆ ಮದುವೆಗೂ ಈ ‘ಬೊಂಡ’ಕ್ಕೂ ಇರುವ ನಂಟಾದರೂ ಏನು? ವಧು ಬೊಂಡ ವನ್ನು ಕೈ ಯಲ್ಲಿ ಹಿಡಿದುಕೊಂಡು ಬರುವ ಅಗತ್ಯವಾದರೂ ಏನು? ಬೊಂಡ ಮಾತ್ರ ಏಕೆ? ಬೇರೆ ಯಾವುದಾದರೂ ವಸ್ತುಗಳನ್ನು ತರಬಹುದೇ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುತ್ತದೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
‘ತೆಂಗಿನಕಾಯಿ’ ಯನ್ನು ಪೂರ್ಣಫಲವೆನ್ನುತ್ತಾರೆ. ಇದು ದಾಂಪತ್ಯ ಜೀವನ ಹೇಗಿರಬೇಕೆಂಬುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಗಂಡ ಹೆಂಡಿರ ದಾಂಪತ್ಯ ಸಾಗುತ್ತಿರುವಾಗ ಅವರಿಬ್ಬರ ನಡುವೆ ಪ್ರೀತಿ,ಪ್ರೇಮ ,ಅನುರಾಗ,ಆಪ್ಯಾಯತೆಗಳು ವೃದ್ಧಿಸಬೇಕೆಂಬುದನ್ನು ಸೂಚಿಸುತ್ತದೆ. ಹೊರಗೆ ನೋಡಲು ಗಟ್ಟಿಯಾಗಿದ್ದರೂ,ಒಳಗೆ ಅಮೃತ ಸಮಾನವಾದ ನೀರಿರುತ್ತದೆ. ಜೀವನವೂ ಸಹ ಇದೇ ರೀತಿಯಾಗಿದೆ. ದಂಪತಿಗಳಿಗೆ ಎಷ್ಟೇ ಕಷ್ಟಗಳು ಬಂದರೂ,ಅವರು ಅನ್ಯೋನ್ಯತೆಯಿಂದ ಇದ್ದರೆ ಬೊಂಡದಲ್ಲಿರುವ ನೀರಿನ ಹಾಗೆ ಜೀವನದಲ್ಲಿ ಸಿಹಿಯನ್ನು ಅನುಭವಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ