Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಊಟವಾದ ನಂತರ ಈ ರೀತಿ ಮಾಡುವವರಿಗೆ ಕಾದಿದೆ ಗ್ರಹಚಾರ

ಊಟವಾದ ನಂತರ ಈ ರೀತಿ ಮಾಡುವವರಿಗೆ ಕಾದಿದೆ ಗ್ರಹಚಾರ
ಬೆಂಗಳೂರು , ಮಂಗಳವಾರ, 3 ಏಪ್ರಿಲ್ 2018 (06:54 IST)
ಬೆಂಗಳೂರು : ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ನಮ್ಮ ಹಸಿವನ್ನು ನೀಗಿಸುವ ಅನ್ನ ದೇವರ ಸಮಾನ. ಅಕಸ್ಮಾತ್ ನಾವು ಅನ್ನವನ್ನು ಕಾಲಿನಿಂದ ತುಳಿದರೆ, ನಮಸ್ಕರಿಸುತ್ತೇವೆ. ಆದರೆ, ಊಟ ಮಾಡಿದ ನಂತರ ನಮಗೆ ಗೊತ್ತಿಲ್ಲದಂತೆ ಮಾಡುವ ತಪ್ಪುಗಳು ನಮಗೆ ದರಿದ್ರವನ್ನುಂಟುಮಾಡುತ್ತವೆ. ಆ ತಪ್ಪುಗಳು ಯಾವುವೆಂದು ಮೊದಲು ತಿಳಿಕೊಂಡು ಸರಿಪಡಿಸಿಕೊಳ್ಳಿ.


 *ಊಟ ಮಾಡಿದ ತಕ್ಷಣ, ತಟ್ಟೆಯಲ್ಲಿ ಕೈ ತೊಳೆಯಬಾರದು. ಊಟದ ನಂತರ ಹೊರಗೆ ಹೋಗಿ ಕೈತೊಳೆಯಬೇಕು. ತಟ್ಟೆಯಲ್ಲಿ ಕೈ ತೊಳೆದರೆ ದರಿದ್ರ ಬರುತ್ತದೆ.

*ಬಹಳಷ್ಟು ಮಂದಿಗೆ ಊಟಮಾಡಿದ ನಂತರ ತಟ್ಟೆ ಬಿಟ್ಟು ಏಳುವ ಅಭ್ಯಾಸ ಇರುವುದಿಲ್ಲ. ಇದು ದಾರಿದ್ರ್ಯದ ಸಂಕೇತ. ಆದುದರಿಂದ ಊಟವಾದ ಒಡನೆಯೇ ತಟ್ಟೆ ಬಿಟ್ಟು ಏಳಬೇಕು.

*ಕೆಲವರು ಊಟವಾದ ನಂತರ ಮೈಮುರಿಯುತ್ತಾರೆ. ಹೀಗೆ ಮಾಡಿದರೆ,ದಾರಿದ್ರ್ಯವನ್ನು ಆಹ್ವಾನಿಸಿದಂತೆಯೇ. ಮೈಮುರಿಯುವುದು ಇಲ್ಲವೆ ತಿಂದ ಒಡನೆಯೆ ಮಲಗುವುದು ಒಳ್ಳೆಯದಲ್ಲ.

*ಊಟ ಮಾಡಿದ ನಂತರ ಬಹಳಷ್ಟು ಮಂದಿ ಕೈತೊಳೆದು, ಒದ್ದೆ ಕೈಗಳನ್ನು ಕೊಡವುತ್ತಾರೆ. ಹೀಗೆ ಮಾಡಿದರೆ, ದರಿದ್ರ ಬಂದಂತೆಯೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಾಫಿಂಗ್ ಬುದ್ಧನ ವಿಗ್ರಹಗಳು ಮನೆಯಲ್ಲಿ ಯಾವ ಭಂಗಿಯಲ್ಲಿದ್ದರೆ ಎಂತಹ ಪರಿಣಾಮ ಉಂಟಾಗುತ್ತದೆ ಗೊತ್ತಾ…?