ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು-ಕೇತು ಒಂಭತ್ತು ಗ್ರಹಗಳು. ಈ ಗ್ರಹದಲ್ಲಾಗುವ ಏರುಪೇರು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ.
ಸೂರ್ಯನನ್ನು ಗ್ರಹಗಳ ರಾಜ ಎನ್ನಲಾಗುತ್ತದೆ. ಜಾತಕದಲ್ಲಿ ಈ ಗ್ರಹ ಅಶುಭವಾಗಿದ್ದರೆ ಚಿನ್ನದಿಂದ ಮಾಡಿದ ಉಂಗುರ ಅಥವಾ ಚಿನ್ನಾಭರಣ ಕಳ್ಳತನವಾಗಬಹುದು ಅಥವಾ ಕಳೆದು ಹೋಗಬಹುದು ಎಂದು ಜ್ಯೋತಿಷ್ಯರು ಹೇಳುತ್ತಾರೆ.
ಅಲ್ಲದೇ ಗುರು ಹಾಗೂ ತಂದೆಯ ನೆರವು ಸಿಗುವುದಿಲ್ಲ. ಕಾನೂನು ಕೆಲಸದಲ್ಲಿ ತೊಂದರೆ ಎದುರಾಗುತ್ತದೆ. ನೌಕರಿಯಲ್ಲಿ ಕಷ್ಟಪಟ್ಟರೂ ಫಲ ಸಿಗುವುದಿಲ್ಲ. ಬೆಳಿಗ್ಗೆ ತುಂಬಾ ಹೊತ್ತು ಹಾಸಿಗೆ ಮೇಲಿರುವ ಜೊತೆಗೆ ಆಲಸ್ಯ ಮನೆ ಮಾಡಿರುತ್ತದೆ. ಮುಖದ ಮೇಲೆ ಎಂದೂ ಒತ್ತಡ ಕಾಣಿಸಿಕೊಳ್ಳುತ್ತದೆ. ಕಣ್ಣು ಹೊಳಪು ಕಳೆದುಕೊಳ್ಳುತ್ತದೆ. ಇದ್ರಿಂದ ದೌರ್ಭಾಗ್ಯ ನಿಮ್ಮನ್ನು ಹಿಂಬಾಲಿಸುತ್ತದೆ. ಹಾಗಾಗಿ ಬೆಳಿಗ್ಗೆ ಬೇಗ ಎದ್ದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದ್ರಿಂದ ಸೂರ್ಯ ನೀಡುವ ಅಶುಭ ಫಲ ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ