Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಮಚ್ಚೆ ಇದೆ?

ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಮಚ್ಚೆ ಇದೆ?
ಬೆಂಗಳೂರು , ಶನಿವಾರ, 4 ಆಗಸ್ಟ್ 2018 (12:24 IST)
ಬೆಂಗಳೂರು: ನಮ್ಮ ದೇಹದಲ್ಲಿರುವ ಮಚ್ಚೆಗೂ ನಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ದೆಹದಲ್ಲಿ ಎಲ್ಲಿ ಮಚ್ಚೆಗಳು ಇವೆಯೋ ಅದನ್ನು ಆಧರಿಸಿ ಅದು ಹೇಗೆ ಅದೃಷ್ಟ ಅಥವಾ ದುರಾದೃಷ್ಟ ಹೇಳುತ್ತದೆ ಎಂಬುದು ಚೀನಾದವರ ನಂಬಿಕೆ. ದೇಹದ ಯಾವ ಭಾಗದಲ್ಲಿ ಮಚ್ಚೆಗಳು ಇದ್ದರೆ ಏನು ಲಾಭ  ಶುಭ  ಎಂದು ಇಲ್ಲಿ ತಿಳಿಸಲಾಗಿದೆ.


ಬಲ ಹುಬ್ಬಿನ ಮೇಲೆ ಮಚ್ಚೆಯಿದ್ರೆ ಜೀವನದಲ್ಲಿ ಸಂತೋಷ ಹೆಚ್ಚಿರುತ್ತದೆ ಎಂದು ನಂಬಲಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ-ಸಾಮರಸ್ಯ ಚೆನ್ನಾಗಿರುತ್ತದೆಯಂತೆ. ಎಡ ಹುಬ್ಬಿನ ಮೇಲೆ ಮಚ್ಚೆಯಿದ್ರೆ ಅಶುಭವಂತೆ. ಸುಖ ಹಾಗೂ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಡಿಮೆಯಿರುತ್ತದೆ.


ಪಾದದಲ್ಲಿ ಸಣ್ಣದಾಗಿ ಮಚ್ಚೆ ಇದ್ದರೆ, ಆ ವ್ಯಕ್ತಿಯು ಪ್ರಯಾಣ ಮಾಡುತ್ತಾನೆ ಎಂದು ಹೇಳಲಾಗುತ್ತದೆ.

ಬಲಗೈಯ ಮೇಲೆ ಮಚ್ಚೆ ಇರುವವರಿಗೆ ಶುಭವಂತೆ ಇನ್ನು ಎಡಗೈನ ಅಂಗೈ ಮೇಲೆ ಮಚ್ಚೆ ಇರುವವರು ಹಣ ಜಾಸ್ತಿ ಖರ್ಚು ಮಾಡುತ್ತಾರಂತೆ.

ಕುತ್ತಿಗೆ ಹಾಗೂ ಭುಜದ ಮಧ್ಯೆ ಮಚ್ಚೆಯಿದ್ರೆ ಅದು ಶುಭವಂತೆ. ಕುತ್ತಿಗೆ ಹಿಂಭಾಗದಲ್ಲಿ ಮಚ್ಚೆಯಿದ್ರೆ ಅಂಥ ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.

ಎರಡೂ ಭುಜಗಳ ನಡುವೆ ಮಚ್ಚೆ ಇರುವವರು ಪರೋಪಕಾರಿ ಹಾಗೂ ಉದಾರಿಯಾಗಿರುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಪ್ಪಲಿಗಳನ್ನು ಈ ರೀತಿ ಇಟ್ಟರೆ ಸಾವು ಖಚಿತ