Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೂಕ ಇಳಿಸಲು ಡಯಟ್ ಮಾಡುವ ಬದಲು ಈ 5 ಟಿಪ್ಸ್ ಫಾಲೋ ಮಾಡಿ ನೋಡಿ

ತೂಕ ಇಳಿಸಲು ಡಯಟ್ ಮಾಡುವ ಬದಲು ಈ 5 ಟಿಪ್ಸ್ ಫಾಲೋ ಮಾಡಿ ನೋಡಿ
ಬೆಂಗಳೂರು , ಭಾನುವಾರ, 5 ಆಗಸ್ಟ್ 2018 (06:31 IST)
ಬೆಂಗಳೂರು : ತೂಕ ಹೆಚ್ಚಾಗುತ್ತಿದೆಎಂಬ ಚಿಂತೆ ಬಿಟ್ಟು ಆಹಾರದಕ್ರಮದ ಕಡೆ ಗಮನ ಕೊಡಿ. ಯಾಕೆಂದರೆ ಬೊಜ್ಜು ಕರಗಿಸುವಲ್ಲಿ ವ್ಯಾಯಾಮ ಶೇ.20ರಷ್ಟು ಸಹಾಯ ಮಾಡಿದೆ ಶೇ. 80ರಷ್ಟು ಸಹಾಯ ಮಾಡುವುದು ನಮ್ಮ ಆಹಾರ ಕ್ರಮವೇ. ಆದ್ದರಿಂದ ತೂಕ ಇಳಿಸುವವರು ಡಯಟ್ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಈ ಟಿಪ್ಸ್ ನ್ನು ಫಾಲೋ ಮಾಡಿ.


* ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನೂ ತಿನ್ನದೇ ಇರುವುದನ್ನು ನೋಡುತ್ತೇವೆ. ಹೀಗೆ ಮಾಡಿದರೆ ತೆಳ್ಳಗಾಗ ಬದಲು ಕಾಯಿಲೆ ಬರುವುದು. ಬೆಳಗ್ಗೆ ಬ್ರೆಡ್ ಸ್ಯಾಂಡ್‌ವಿಚ್‌, ಒಂದು ಗ್ಲಾಸ್‌ ಹಾಲು, ಉಪ್ಪಿಟ್ಟು, ಇಡ್ಲಿ, ಮೊಳಕೆ ಕಾಳುಗಳು ಹೀಗೆ ಏನಾದರೂ ಆರೋಗ್ಯಕರ ಆಹಾರವನ್ನು ತಿನ್ನಿ.

* ಬೇಗನೆ ಹಸಿವು ಆಗದಿರಲು ನಾವು ತಿನ್ನುವ ಆಹಾರದಲ್ಲಿ ಅತ್ಯಧಿಕ ನಾರಿನಂಶ ಹಾಗೂ ಪ್ರೊಟೀನ್‌ ಇದೆಯೇ ಎಂದು ಗಮನಿಸುವುದು ಒಳ್ಳೆಯದು.

*ಹಣ್ಣುಗಳನ್ನು ಜ್ಯೂಸ್‌ ಮಾಡಿ ತಿನ್ನುವ ಬದಲು ಕಚ್ಚಿ ತಿನ್ನಿ.

*ಡಯಟ್‌ ಎಂದು ಬಾಯಿಗೆ ರುಚಿಯಿಲ್ಲದ ಆಹಾರವನ್ನು ತಿಂದು ಕಷ್ಟ ಪಡುವುದು ಬೇಡ. ರಾಗಿ, ಗೋಧಿ, ಮೊಳಕೆ ಕಾಳುಗಳನ್ನು ಬಳಸಿ ರುಚಿ-ರುಚಿಯಾದ ಪದಾರ್ಥ ಮಾಡಿ ಸೇವಿಸಿ.

*ಕುರುಕುಲು ತಿಂಡಿಗಳು ಬಾಯಿಗಷ್ಟೇ ರುಚಿ. ಅದೇ ನಟ್ಸ್ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು, ತೂಕ ಹೆಚ್ಚಾಗುತ್ತದೆ ಎಂಬ ಟೆನ್ಷನ್ ಇರಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಿ ಚಪ್ಪರಿಸಕೊಂಡು ತಿನ್ನಬಹುದಾದ ಚಿಕನ್ ಗ್ರೀನ್ ಮಸಾಲಾ