ಬೆಂಗಳೂರು : ನಮ್ಮ ಪೂರ್ವಿಕರು, ಮನಸ್ಸಿಗೆ ಹತ್ತಿರವಾದವರು ಹಾಗು ಪ್ರೀತಿ ಪಾತ್ರರು ಮರಣ ಹೊಂದಿದರೆ ಅವರ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ನೇತುಹಾಕುತ್ತೆವೆ. ಆದರೆ ಈ ಫೋಟೋಗಳನ್ನು ಮನೆಯ ಗೋಡೆಗಳ ಮೇಲೆ ಹಾಕಲು ವಾಸ್ತು ಪ್ರಕಾರ ಕೆಲವು ನಿಯಮಗಳಿವೆ. ಅದನ್ನು ಪಾಲಿಸಬೇಕು ಇಲ್ಲವಾದರೆ ನಮ್ಮ ಸಂಪತ್ತನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ.
ಮರಣ ಹೊಂದಿದ ಮೇಲೆ ನಮ್ಮ ಪ್ರೀತಿ ಪಾತ್ರರಿಗೆ ಗೌರವ ತೋರಬೇಕೆಂದು ಅವರ ಫೋಟೋವನ್ನು ದೇವರ ಮನೆಯಲ್ಲಿ ನೇತು ಹಾಕಬಾರದು. ಇದರಿಂದ ನಿಮ್ಮ ಮೇಲೆ ಅವು ನಕರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ ಹಾಗು ಇದನ್ನು ಅಮಂಗಳವೆಂದು ಕೂಡ ಹೇಳುತ್ತಾರೆ. ಆದ್ದರಿಂದ ನಿಮ್ಮ ಮನೆಯಲ್ಲಿ ದೇವರ ಕೋಣೆ ಉತ್ತರ ಪೂರ್ವ ದಿಕ್ಕಿನಲ್ಲಿದ್ದರೆ ಮರಣ ಹೊಂದಿದವರ ಫೋಟೋಗಳನ್ನು ಪೂರ್ವ ದಿಕ್ಕಿನಲ್ಲಿ ನೇತು ಹಾಕಬೇಕು.
ಮನೆಯ ದಕ್ಷಿಣ ಹಾಗು ಪಶ್ಚಿಮ ದಿಕ್ಕಿನಲ್ಲಿ ಮರಣ ಹೊಂದಿದವರ ಫೋಟೋಗಳನ್ನು ಹಾಕಬಾರದು. ಇದು ನಿಮ್ಮ ಮನೆಯಲ್ಲಿರುವವರ ವೃತ್ತಿ ಜೀವದ ಏಳಿಗೆಯನ್ನು ಕುಂಠಿತಗೊಳಿಸುತ್ತದೆ. ಹಾಗೆ ಸಂಪತ್ತನ್ನು ನಾಶ ಮಾಡಲು ಕಾರಣವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ