ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ಮಾತ್ರವಲ್ಲ ಅದರಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಇವು ರುಚಿಕರವು ಹೌದು ಆರೋಗ್ಯದಾಯಕವು ಹೌದು.
ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುವಂತ ತಿಂಡಿಗಳಲ್ಲಿ ಹಲಸಿನ ಹಣ್ಣಿನ ಮುಳ್ಕ ತುಂಬಾನೇ ಜನಪ್ರಿಯ ಅದನ್ನು ಹೇಗೆ ತಯಾರಿಸುವುದು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು -
ಹಲಸಿನ ಹಣ್ಣಿನ ತೊಳೆ - 20
3 - 4 ಗಂಟೆ ನೆನೆಸಿದ ಅಕ್ಕಿ - 3/4 - 1 ಕಪ್
ತುರಿದ ಬೆಲ್ಲ - 1/2 ಕಪ್
ತೆಂಗಿನಕಾಯಿ ತುರಿ - 1/2 ಕಪ್
ಉಪ್ಪು
ಎಲಕ್ಕಿ
ಎಣ್ಣೆ
ಮಾಡುವ ವಿಧಾನ-
- ಒಂದು ಮಿಕ್ಸಿಯಲ್ಲಿ ಹಲಸಿನಹಣ್ಣಿನ ತೊಳೆಗಳಿಂದ ಬೀಜಗಳನ್ನು ಬೇರ್ಪಡಿಸಿ ತೆಗೆದುಕೊಳ್ಳಿ, ಅದಕ್ಕೆ ನೆನೆಸಿದ ಅಕ್ಕಿ, ತೆಂಗಿನಕಾಯಿ ತುರಿ, ತುರಿದ ಬೆಲ್ಲ, ಉಪ್ಪು, ಎಲಕ್ಕಿ ಹಾಕಿ ತರಿತರಿಯಾಗಿ ರುಬ್ಬಿಕೊಂಡು 15-20 ನಿಮಿಷಗಳು ಪಕ್ಕಕ್ಕಿಡಿ.
- ಸಾಧಾರಣ ಉರಿಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಹಲಸಿನ ಹಣ್ಣಿನ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳ ಆಕಾರದಲ್ಲಿ ಎಣ್ಣೆಗೆ ಬಿಡಿ. ಮುಳ್ಕ ಕಂದು ಬಣ್ಣ ಬರುವರೆಗೆ ಕರಿದು ತೆಗೆದರೆ ರುಚಿಕರವಾದ ಹಲಸಿನ ಹಣ್ಣಿನ ಮುಳ್ಕ ಸಿದ್ದ, ತುಪ್ಪದ ಜೊತೆಗೆ ಸೇವಿಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.