ಬೆಂಗಳೂರು : ಹೆಚ್ಚಿನ ಹುಡುಗಿಯರಿಗೆ ಕೈಕಾಲುಗಳಲ್ಲಿ ತುಂಬಾ ಕೂದಲುಗಳಿರುತ್ತವೆ. ಅದು ನೋಡಲು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ಇದರಿಂದ ಅವರಿಗೆ ಫ್ಯಾಶನ್ ಡ್ರೆಸ್ ಗಳನ್ನು ಧರಿಸಲು ಆಗುವುದಿಲ್ಲ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಹೆಚ್ಚು ಹಣಗಳನ್ನು ಕೊಟ್ಟು ವ್ಯಾಕ್ಸ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕ್ರೀಂಗಳಿಂದ ಚರ್ಮಗಳಲ್ಲಿ ಅಲರ್ಜಿ ಆಗುವ ಸಂಭವವಿರುತ್ತದೆ.
ಅದಕ್ಕಾಗಿ ಮನೆಯಲ್ಲೇ ವ್ಯಾಕ್ಸ್ ತಯಾರಿಸಿ ಬಳಸಬಹುದು. ಅದು ನೈಸರ್ಗಿಕವಾಗಿದ್ದು, ಯಾವುದೆ ಎಫೆಕ್ಟ್ ಕೂಡ ಆಗುವುದಿಲ್ಲ. 1ಕಪ್ ಸಕ್ಕರೆಗೆ (200ಗ್ರಾಂ), ¼ ಕಪ್ (60ಎಂ.ಎಲ್.)ನಿಂಬೆರಸ ಹಾಕಿ , ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಮಿಡಿಯಂ ಹಿಟ್ ನಲ್ಲಿ ಕುದಿಸುತ್ತಾ ಅದನ್ನು ಮಿಕ್ಸ್ ಮಾಡುತ್ತಾಇರಿ. 10 ನಿಮಿಷ ಚೆನ್ನಾಗಿ ಕುದಿಸಿ ಅದು ಬ್ರೌನ್ ಕಲರ್ ಬಂದ ಮೇಲೆ ಅದನ್ನು ಇಳಿಸಿ ಒಂದು ಗ್ಲಾಸ್ ಹಾಕಿ ಉಗುರುಬೆಚ್ಚಗಾದ ಮೇಲೆ ಕಾಲಿಗೆ ಬೇಬಿ ಪೌಡರ್ ಹಚ್ಚಿ ಒಂದು ಸ್ಟಿಕ್ ನ ಸಹಾಯದಿಂದ ಈ ಮಿಶ್ರಣವನ್ನು ಕಾಲಿಗೆ ಹಚ್ಚಿ. ಒಂದು ಚಿಕ್ಕ ಬಟ್ಟೆಯ ಪೀಸನ್ನು ಅದರ ಮೇಲೆ ಇಟ್ಟು ಒತ್ತಿ ನಂತರ ಎಳೆಯಿರಿ. ಹೀಗೆ ಕೈಕಾಲಲ್ಲಿ ಕೂದಲಿರುವ ಕಡೆ ಹಚ್ಚಿ ಈ ರೀತಿಯಾಗಿ ಮಾಡಿದರೆ ಕೂದಲು ನಿವಾರಣೆಯಾಗುತ್ತದೆ. ನಂತರ ಕಾಲಿಗೆ ಬೇಬಿ ಆಯಿಲ್ ಹಚ್ಚಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ