Publish Date: Sat, 08 Feb 2020 (09:45 IST)
Updated Date: Sat, 08 Feb 2020 (09:50 IST)
ಬೆಂಗಳೂರು : ಮನೆಯಿಂದ ಹೊರಗೆ ಹೋಗುವಾಗ ಹೋದ ಕೆಲಸ ನಿರ್ವಿಘ್ನವಾಗಿ ನೆರವೇರಲಿ ಎಂದು ಬಯಸುತ್ತೇವೆ. ನಿಮ್ಮ ಕೆಲಸ ಯಾವುದೇ ಅಡಚಣೆ ಇಲ್ಲದೇ ಆಗಬೇಕೆಂದರೆ ಮನೆಯಿಂದ ಹೊರಗೆ ಹೋಗುವಾಗ ಈ ಗಿಡದ ಮುಂದೆ ಈ ಸಣ್ಣ ಕೆಲಸ ಮಾಡಿ.
ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡವಿರಲೇಬೇಕು. ತುಳಸಿ ಗಿಡ ಲಕ್ಷ್ಮೀದೇವಿಯ ಸ್ವರೂಪವಾದ್ದರಿಂದ ನಮ್ಮ ಕೆಲಸದಲ್ಲಿ ಯಶಸ್ಸು ಕಾಣಲು ಲಕ್ಷ್ಮೀಯ ಅನುಗ್ರಹ ಪಡೆಯಬೇಕು. ಆದಕಾರಣ ಹೊರಗಡೆ ಹೋಗುವಾಗ ತುಳಸಿ ಗಿಡದ ಮುಂದೆ ಕೈ ಮುಗಿದು ಹೋಗುವ ಕೆಲಸ ನಿರ್ವಿಘ್ನವಾಗಿ ನೆರವೇರಲಿ ಎಂದು ಬೇಡಿಕೊಳ್ಳಿ.
ಹಾಗೇ ಹೊರಗಡೆ ಹೋಗುವ ದಾರಿಯಲ್ಲಿ ಬೇವಿನ ಮರ ನೋಡಿ ಹೋದರೆ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ. ಹಾಗೂ ಅದೃಷ್ಟ ಒಲಿದು ಬರುತ್ತದೆ ಎಂದು ಪಂಡಿತರು ಹೇಳುತ್ತಾರೆ.