Publish Date: Fri, 07 Feb 2020 (10:29 IST)
Updated Date: Fri, 07 Feb 2020 (10:30 IST)
ಬೆಂಗಳೂರು : ಫೆಬ್ರವರಿ 17ರಂದು ವಿಧಾನಪರಿಷತ್ ನ 1 ಸ್ಥಾನಕ್ಕೆ ಉಪಚುನಾವಣೆ ಹಿನ್ನಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಡಿಸಿಎಂ ಲಕ್ಷ್ಮಣ್ ಸವದಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ತಮ್ಮ ಖಾಸಗಿ ಕಾರಿನಲ್ಲಿ ಬಂದು ಸಿಎಂ ಅವರನ್ನು ಭೇಟಿ ಮಾಡಿದ ಲಕ್ಷ್ಮಣ್ ಸವದಿ ಸಿಎಂ ಜೊತೆ ಪರಿಷತ್ ಉಪಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪರಿಷತ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ಲಕ್ಷ್ಮಣ್ ಸವದಿ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ –ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಆತಂಕಗೊಂಡು ಅವರು ಬೆಳ್ಳಂಬೆಳಿಗ್ಗೆ ಸಿಎಂ ರನ್ನು ಭೇಟಿಮಾಡಿದ್ದಾರೆ ಎನ್ನಲಾಗಿದೆ.