ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಮ್ಮ ಆಹಾರ ಶೈಲಿಯಿಂದಾಗಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿದೆ.
ಮಸಾಲ, ಖಾರದ ವಸ್ತು ತಿನ್ನುವ ಹಾಗಿಲ್ಲ, ಖಾಲಿ ಹೊಟ್ಟೆ ಬಿಡುವಂತಿಲ್ಲ. ಎದೆ ಉರಿ, ಹೊಟ್ಟೆ ಉಬ್ಬರ, ಗಂಟಲು ಉರಿ, ಹೊಟ್ಟೆ ಉರಿ ಇತ್ಯಾದಿ ಗ್ಯಾಸ್ಟ್ರಿಕ್ ಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುತ್ತೇವೆ. ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅನೇಕ ಔಷಧಿ, ಮನೆ ಮದ್ದುಗಳನ್ನು ಮಾಡಿ ಬೇಸತ್ತಿದ್ದೀರಾ? ಹಾಗಿದ್ದರೆ ಯೋಗಾಸನ ಟ್ರೈ ಮಾಡಿ ನೋಡಬಹುದು. ಯೋಗಾಸನದಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದಕ್ಕಾಗಿ ನೀವು ಪ್ರತಿನಿತ್ಯ ಪವನ ಮುಕ್ತಾಸನ ಮಾಡಿದರೆ ಸಾಕು.
ಪವನ ಮುಕ್ತಾಸನ ಮಾಡುವುದು ಹೇಗೆ?
ಈ ಆಸನದಿಂದ ನಿಮ್ಮ ಕೆಳಹೊಟ್ಟೆ, ಸೊಂಟ, ತೊಡೆ ಮತ್ತು ಪೃಷ್ಟಕ್ಕೂ ರಿಲೀಫ್ ಸಿಗುತ್ತದೆ.
-
ಸಮತಟ್ಟಾದ ನೆಲದ ಮೇಲೆ ಅಂಗಾತ ಮಲಗಿ ಕಾಲುಗಳನ್ನು ಮಾತ್ರ 90 ಡಿಗ್ರಿ ನೇರಕ್ಕೆ ಬಾಗಿಸಿ
-
ಈಗ ಎರಡೂ ಮೊಣಕಾಲನ್ನು ಬಾಗಿಸಿ ತೊಡೆಯನ್ನು ಸೊಂಟದ ಭಾಗಕ್ಕೆ ತನ್ನಿ.
-
ಮೊಣಕಾಲು ಮತ್ತು ಪಾದವನ್ನು ಸೇರಿಸಿ ಇರಿಸಿ.
-
ಕೈಗಳನ್ನು ಕಾಲುಗಳ ಸುತ್ತ ಹಾಕಿ
-
ಕೈ ಬೆರಳುಗಳನ್ನು ಬೆಸೆದುಕೊಂಡು ಕಾಲುಗಳನ್ನು ಹಿಡಿದಿಟ್ಟುಕೊಳ್ಳಿ.
-
ಕುತ್ತಿಗೆಯನ್ನು ಕೊಂಚ ಎತ್ತಿ ಎದೆಯ ಭಾಗಕ್ಕೆ ಗಲ್ಲ ತಾಕಿಸಿ.
ಇದೇ ರೀತಿ 20 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಂಡು ಮತ್ತು ಬಿಟ್ಟುಕೊಂಡು ಸುಮಾರು 1 ನಿಮಿಷಗಳ ಕಾಲ ಕಸರತ್ತು ಮಾಡಿದರೆ ಸಾಕು.