ಬೆಂಗಳೂರು: ಜಾತಕದಲ್ಲಿ ಗಜ ಕೇಸರಿ ಯೋಗವಿದ್ದರೆ ಆ ವ್ಯಕ್ತಿಗಳು ಯಾವುದೇ ಕೆಲಸ ಮಾಡಲು ಹೊರಟರೂ ವಿಜಯಶಾಲಿಗಳಾಗುತ್ತಾರೆ ಎಂಬ ಮಾತಿದೆ.
ಇದು ನಿಜವೂ ಹೌದು. ಗಜಕೇಸರಿ ಯೋಗವಿದ್ದರೆ ವಿದ್ಯೆ, ಸಂಪತ್ತು, ಕೀರ್ತಿ, ಯಶಸ್ಸಿಗೆ ಯಾವುದೇ ಕೊರತೆಯಾಗುವುದಿಲ್ಲ. ಹಾಗಿದ್ದರೆ ಗಜಕೇಸರಿ ಯೋಗ ಯಾರಿಗೆ ಇರುತ್ತದೆ?
ಜಾತಕದಲ್ಲಿ ಗುರು ಮತ್ತು ಚಂದ್ರ ಗ್ರಹ ಒಟ್ಟಿಗೇ ಇದ್ದಾಗ ಗಜಕೇಸರಿ ಯೋಗ ಕಂಡುಬರುತ್ತದೆ. ಗಜ ಎಂದರೆ ಆನೆ, ಕೇಸರಿ ಎಂದರೆ ಸಿಂಹದ ಪ್ರತೀಕವಾಗಿದೆ. ಜಾತಕದಲ್ಲಿ ಗಜಕೇಸರಿ ಯೋಗವಿರುವ ಪುರುಷರು ಬುದ್ಧಿ ಶಾಲಿಗಳು, ಶಕ್ತಿಶಾಲಿಗಳೂ ಆಗಿರುತ್ತಾರೆ.
ಜಾತಕದ ಪ್ರಕಾರ ಏಳನೆಯ ಮನೆಯುವ ವಿವಾಹಕ್ಕೆ ಸಂಬಂಧಿಸಿದ್ದಾಗಿದೆ. ಗಜಕೇಸರಿ ಯೋಗವು ಏಳನೇ ಮನೆಯಿಂದ ನಿಯಂತ್ರಿಸಲ್ಪಡುತ್ತದೆ. ಹೀಗಾಗಿ ಈ ಯೋಗವಿರುವ ಮಹಿಳೆಯರು ವಿವಾಹ, ಧನ, ಸುಖಾದಿ ಸೌಕರ್ಯಗಳನ್ನು ಹೊಂದಿ ಸಂತೃಪ್ತರಾಗಿರುತ್ತಾರೆ.