ಬೆಂಗಳೂರು: ಕೆಲವೊಮ್ಮೆ ಹಾರ್ಮೋನ್ ನ ಸಮಸ್ಯೆಯಿಂದ ಅಥವಾ ಗರ್ಭಾಶಯದ ಸಮಸ್ಯೆಗಳಿಂದ ಮುಟ್ಟು ತಡವಾಗಿ ಆಗಬಹುದು. ಮುಟ್ಟು ಸಮಯಕ್ಕೆ ಸರಿಯಾಗಿ ಆಗಲು ಈ ಯೋಗಾಸನವನ್ನು ಟ್ರೈ ಮಾಡಬಹುದು.
ಮುಟ್ಟಿನ ದಿನ ಹತ್ತಿರ ಬಂದಾಗ ಮಹಿಳೆಯರು ಸಾಕಷ್ಟು ಲಕ್ಷಣಗಳನ್ನು ಅನುಭವಿಸುತ್ತಾರೆ. ಕಾಲು, ಕಿಬ್ಬೊಟ್ಟೆಗಳಲ್ಲಿ ನೋವು ಇತ್ಯಾದಿ. ಆದರೆ ಕೆಲವರಿಗೆ ಸಮಯಕ್ಕೆ ಸರಿಯಾಗಿ ಮುಟ್ಟು ಆಗದೇ ಮಾನಸಿಕವಾಗಿ ಖಿನ್ನತೆಗೊಳಗಾಗುತ್ತಾರೆ. ಸಮಯಕ್ಕೆ ಸರಿಯಾಗಿ ಮುಟ್ಟು ಆಗಲು ಧನುರಾಸನ ಮಾಡುವುದು ಸೂಕ್ತವಾಗಿದೆ.
ಧನುರಾಸನ ಮಾಡುವುದು ಹೇಗೆ?
ಹೊಟ್ಟೆಯ ಮೇಲೆ ಮಲಗಿ ಎರಡೂ ಕಾಲುಗಳನ್ನು ಮತ್ತು ತಲೆಯನ್ನು ಹಿಮ್ಮುಖವಾಗಿ ಮೇಲಕ್ಕೆತ್ತಿ. ನಿಮ್ಮ ಕೈಗಳನ್ನು ಹಿಂದೆ ಚಾಚಿ ಎರಡೂ ಪಾದಗಳನ್ನು ಹಿಡಿದುಕೊಳ್ಳಿ.
ಸಾಧ್ಯವಾದಷ್ಟು ಹೊತ್ತು ಇದೇ ಭಂಗಿಯಲ್ಲಿರಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲಿನ ಭಂಗಿಗೆ ತಲುಪಿ. ಇದೇ ರೀತಿ ಮತ್ತೆ ಮಾಡಿ. ನಿಯಮಿತವಾಗಿ 5-6 ಬಾರಿ ಈ ರೀತಿ ಮಾಡಿದರೆ ಮುಟ್ಟಿನ ಸಮಸ್ಯೆ ಮಾತ್ರವಲ್ಲ, ಬೆನ್ನು, ತೊಡೆ ನೋವಿನ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.