ಬೆಂಗಳೂರು: ಕೆಲವರಿಗೆ ತುಟಿಗಳು ಕಪ್ಪಾಗಿ ಅಸಹ್ಯವಾಗಿ ಕಾಣುತ್ತಿದೆ ಎಂದು ಬೇಸರವಿರುತ್ತದೆ. ಎಲ್ಲರ ತುಟಿಯೂ ತೊಂಡೆ ಹಣ್ಣಿನಂತೆ ಕೆಂಪಾಗಿರಲ್ಲ ಅಲ್ವಾ? ಹಾಗಿದ್ದರೆ ಕೆಂಪಗೆ ಸುಂದರವಾಗಿರುವ ತುಟಿಯಿರಬೇಕಾದರೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್.
ಕಪ್ಪಗಾಗಿರುವ ತುಟಿಯನ್ನು ಕೆಂಪಾಗಿ ಸುಂದರವಾಗಿ ಕಾಣುವಂತೆ ಮಾಡಲು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಮದ್ದು ಮಾಡಬಹುದು. ಮೊದಲನೆಯದ್ದು ನಿಂಬೆ ಹಣ್ಣು ಮತ್ತು ಸಕ್ಕರೆ ಬಳಸಿ ಮಾಡುವ ಸ್ಕ್ರಬ್. ಎರಡನೆಯದ್ದು ಜೇನು ತುಪ್ಪ ಮತ್ತು ಸಕ್ಕರೆ ಬಳಸಿ ಮಾಡುವ ಸ್ಕ್ರಬ್. ಇವೆರಡನ್ನೂ ಬಳಸುವುದರಿಂದ ಕಪ್ಪಗಿರುವ ತುಟಿಂಗಳು ಕೆಂಪಾಗಿ ಸುಂದರವಾಗಿ ಕಾಣುತ್ತದೆ. ಇದನ್ನು ಬಳಸುವುದು ಹೇಗೆ ಇಲ್ಲಿ ನೋಡಿ.
ನಿಂಬೆ ಹಣ್ಣು ಮತ್ತು ಸಕ್ಕರೆ ಸ್ಕ್ರಬ್
ನಿಂಬೆ ಹಣ್ಣನ್ನು ಕತ್ತರಿಸಿ ಅದರ ಮೇಲೆ ಸಕ್ಕರೆಯ ಪುಡಿಯನ್ನು ಉದುರಿಸಿ. ಈ ಹೋಳುಗಳನ್ನು ನಿಮ್ಮ ಕಪ್ಪಗಿರುವ ತುಟಿಯ ಮೇಲೆ ಸುಮಾರು 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಫಲಿತಾಂಶ ಕಾಣಬಹುದು.
ಜೇನು ತುಪ್ಪ ಮತ್ತು ಸಕ್ಕರೆ ಸ್ಕ್ರಬ್
ಜೇನು ತುಪ್ಪ ಮತ್ತು ಸಕ್ಕರೆಯ ಸ್ಕ್ರಬ್ ನಿಂದ ತುಟಿಗಳ ರಂಗು ಪಡೆಯುವುದಲ್ಲದೆ, ಚರ್ಮವೂ ಮೃದುವಾಗುತ್ತದೆ. ಒಂದು ಸ್ಪೂನ್ ಜೇನು ತುಪ್ಪಕ್ಕೆ ಸಕ್ಕರೆ ಬೆರೆಸಿ ಮಿಶ್ರಣ ತಯಾರಿಸಿಕೊಂಡು ಇದನ್ನು ತುಟಿಗಳ ಮೇಲೆ ಹಚ್ಚಿ. ನಿಯಮಿತವಾಗಿ ಈ ರೀತಿ ಮಾಡುತ್ತಿದ್ದರೆ ತುಟಿಂಗಳು ಸುಂದರವಾಗಿ ಕಾಣುತ್ತವೆ.