Webdunia - Bharat's app for daily news and videos

Install App

ದೈನಂದಿನ ಜೀವನದಲ್ಲಿ ಯೋಗದ ಮಹತ್ವ

ಅತಿಥಾ
ಬುಧವಾರ, 13 ಡಿಸೆಂಬರ್ 2017 (18:55 IST)
ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ ಎಂದು ಕರೆಯಲ್ಪಟ್ಟಿದೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ವ್ಯಾಪಕವಾಗಿ ವಿವಿಧ ಯೋಗ ಶಾಲೆಗಳು, ಪದ್ಧತಿಗಳು ಮತ್ತು ಗುರಿಗಳನ್ನು ಇದು ಹೊಂದಿದೆ. 
ಸಂಸ್ಕೃತದಲ್ಲಿ, ಯೋಗ ಎಂಬ ಪದವು ಮೂಲವಾಗಿ ಯುಜ್‌ನಿಂದ ಬರುತ್ತದೆ, ಇದರರ್ಥ "ಸೇರಿಸಲು" ಅಥವಾ "ಸೇರಲು" ಆಗಿದೆ. 19 ನೇ ಶತಮಾನದ ಮಧ್ಯಭಾಗದಲ್ಲಿ ಭಾರತೀಯ ತತ್ತ್ವಶಾಸ್ತ್ರದ ಇತರ ವಿಷಯಗಳ ಜೊತೆಗೆ ವಿದ್ಯಾವಂತ ಪಾಶ್ಚಾತ್ಯ ಜನರಿಗೆ ಯೋಗವು ಗಮನ ಸೆಳೆದಿದೆ. ಇಂತಹ ಯೋಗ ಕೇವಲ ದೈಹಿಕವಾಗಿ ಅಷ್ಟೆ ಅಲ್ಲದೆ ಮಾನಸಿಕವಾಗಿಯೂ ಅಷ್ಟೇ ಲಾಭಗಳನ್ನು ನೀಡುತ್ತದೆ.
 
ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದ ಗ್ಯಾಜೆಟ್‌ಗಳು, ಆರಾಮ ಮತ್ತು ಅನುಕೂಲಕ್ಕಾಗಿ ನಮ್ಮನ್ನು ಸೆಳೆಯುತ್ತವೆ. ಆದರೆ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯದ ತೊಂದರೆಗಳಂತಹ ಅನೇಕ ರೋಗಗಳನ್ನು ಜೊತೆಗೆ ಇವು ಸದ್ದಿಲ್ಲದೇ ನಮ್ಮೆಡೆ ಕರೆತರುತ್ತದೆ.
 
ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಪ್ರದೇಶಗಳಲ್ಲಿ ಎಂಟು ಹಂತದ ಬೆಳವಣಿಗೆಯನ್ನು ಒಳಗೊಂಡಿರುವ ಅಭ್ಯಾಸದ ವಿಧಾನವೆಂದರೆ ದೈನಂದಿನ ಜೀವನದಲ್ಲಿ ಯೋಗ. ದೇಹವು ದೈಹಿಕವಾಗಿ ಆರೋಗ್ಯಕರವಾಗಿದ್ದರೆ, ಮನಸ್ಸು ಸ್ಪಷ್ಟ, ಕೇಂದ್ರೀಕೃತವಾಗಿರುತ್ತದೆ ಮತ್ತು ಒತ್ತಡವು ನಿಯಂತ್ರಣದಲ್ಲಿರುತ್ತದೆ. ದಿನದ 24 ಗಂಟೆಯಲ್ಲಿ ಕೇವಲ 20 ನಿಮಿಷ ಯೋಗ ಮಾಡಿದರೆ ಸಾಕು ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ-ಶಕ್ತಿಯನ್ನು ನೀಡುತ್ತದೆ.
 
ಉತ್ತಮ ಆರೋಗ್ಯಕ್ಕಾಗಿ ಪ್ರತಿ ದಿನ ಸುಲಭವಾಗಿ ಮಾಡುವಂತಹ ಕೆಲವು ಯೋಗಾಭ್ಯಾಸಗಳ ಕುರಿತು ತಿಳಿದುಕೊಳ್ಳೋಣ
 
1. ಪ್ರಾಣಾಯಾಮ
ಪ್ರಾಣಾಯಾಮ ಎಂಬುದು ದೇಹದಲ್ಲಿ ಸಕಾರಾತ್ಮಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುವ ಪರಿಪೂರ್ಣ ಉಸಿರಾಟದ ವ್ಯಾಯಾಮವಾಗಿದೆ ಮತ್ತು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಪ್ರಾಣಾಯಾಮ ಮಾಡುವುದರಿಂದಾಗಿ ಉಸಿರಾಟದ ಸಮಸ್ಯೆಗಳಿಗೆ ನಿಯಂತ್ರಣ ನೀಡುತ್ತದೆ.
 
2. ಕಪಾಲಭಾತಿ
ಕಪಾಲಭಾತಿ ಪ್ರಾಣಾಯಾಮ ಎಂಬುದು ಉಸಿರಾಟದ ವ್ಯಾಯಾಮದ ಒಂದು ವಿಧವಾಗಿದ್ದು, ಇದು ಕಾಲಕಾಲಕ್ಕೆ ವಿವಿಧ ಕಾಯಿಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಮಾನಸಿಕ ಯೋಗಕ್ಷೇಮ, ಮಧುಮೇಹದ ನಿಯಂತ್ರಣ, ಬೆನ್ನು ನೋವು, ಅಜೀರ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
 
3. ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರವು ಅತ್ಯಂತ ಪ್ರಮುಖ ಯೋಗ ಪದ್ಧತಿಗಳಲ್ಲಿ ಒಂದಾಗಿದೆ. 12 ವಿಭಿನ್ನ ಮಂತ್ರಗಳನ್ನು ಪಠಿಸುವ ಮೂಲಕ 12 ಪ್ರಕಾರದ ಯೋಗಾಸನಗಳನ್ನು ಮಾಡಲಾಗುತ್ತದೆ. ಇದು ದೇಹಕ್ಕೆ ಮತ್ತು ಮಾನಸಿಕವಾಗಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
 
4. ತದಾಸನ
ಇದು ನಿಮ್ಮ ಪಾದಗಳು ಮತ್ತು ಕಾಲುಗಳಿಗೆ ಸಾಕಷ್ಟು ರಕ್ತ ಪರಿಚಲನೆ ನೀಡುವ ಮೂಲಕ ಹೆಚ್ಚು ಶಕ್ತಿ ಒದಗಿಸುತ್ತದೆ ಮತ್ತು ಮಾನಸಿಕ ಸ್ಥಿಮಿತತೆಯನ್ನು ನೀಡುವುದರ ಜೊತೆಗೆ ಖಿನ್ನತೆಯನ್ನು ನಿವಾರಿಸುತ್ತದೆ ಮತ್ತು ನಿಮಗೆ ಚೈತನ್ಯವನ್ನು ತುಂಬುತ್ತದೆ.
 
5. ಶವಾಸನ
ಇದು ನಿಮ್ಮ ಇಡೀ ದೇಹವನ್ನು ಸಡಿಲಗೊಳಿಸುತ್ತದೆ ಮತ್ತು ಒತ್ತಡ, ಆಯಾಸ, ಖಿನ್ನತೆಯನ್ನು ಬಿಡುಗಡೆ ಮಾಡಿ ನಿದ್ರಾಹೀನತೆಯನ್ನು ಗುಣಪಡಿಸುತ್ತದೆ.
 
ಒಟ್ಟಿನಲ್ಲಿ ಪುರಾತನ ಕಾಲದಿಂದಲೂ ಯೋಗಾಸನವು ಹೆಚ್ಚಿನ ಪ್ರಾಮುಖ್ಯತೆ ಮತ್ತು ಮಹತ್ವ ಪಡೆದುಕೊಂಡಿದೆ. ಸರಿಯಾದ ಮಾರ್ಗದರ್ಶಕರ ಮೂಲಕ ಅದನ್ನು ಅರಿತು ಯೋಗಾಭ್ಯಾಸ ಮಾಡಿದಲ್ಲಿ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments