Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಿಲ್ಲಾಧಿಕಾರಿಗೆ ಜೀವಬೆದರಿಕೆ ಹಾಕಿದ ಬಿಜೆಪಿ ಸಂಸದೆ

ಜಿಲ್ಲಾಧಿಕಾರಿಗೆ ಜೀವಬೆದರಿಕೆ ಹಾಕಿದ ಬಿಜೆಪಿ ಸಂಸದೆ

ರಾಮಕೃಷ್ಣ ಪುರಾಣಿಕ

ಲಖನೌ , ಬುಧವಾರ, 13 ಡಿಸೆಂಬರ್ 2017 (17:36 IST)
ಬಾರಾಬಂಕಿಯ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್, ಜಿಲ್ಲಾಧಿಕಾರಿ ಅಜಯ್ ಕುಮಾರ್ ದ್ವಿವೇದಿ ಅವರಿಗೆ ಸರ್ಕಾರಿ ಭೂಮಿಯಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ಹೋದಾಗ ಜೀವ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
“ಬಾರಾಬಂಕಿ ಮೇ ಜೀನಾ ಮುಷ್ಕಿಲ್ ಕರ್ ದುಂಗಿ (ನೀವು ಬಾರಾಬಂಕಿಯಲ್ಲಿ ವಾಸಿಸಲು ಕಷ್ಟಪಡುವಂತೆ ಮಾಡುತ್ತೇನೆ),” ಎಂದು ಐಎಎಸ್ ಟ್ರೇನೀ ಮೇಲೆ ರಾವತ್ ಎಚ್ಚರಿಸಿದ್ದಾರೆ.
 
ರಾವತ್ ಅವರ ಬೆಂಬಲಿಗರು, ಎಸ್‌ಡಿಎಂ ಮತ್ತು ಅವರ ತಂಡದವರು ಬಹುಸಂಖ್ಯೆಯಲ್ಲಿದ್ದಿದ್ದರಿಂದ ಅವರನ್ನು ತೊರೆಯುವಂತೆ ಒತ್ತಾಯಗೊಳಿಸಿದರು. ಅತಿಕ್ರಮಿಸಿದ ಸರಕಾರದ ಭೂಮಿಯನ್ನು ಮುಕ್ತಗೊಳಿಸಲು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಗಳ ಹೊರತಾಗಿಯೂ ಈ ಘಟನೆ ನಡೆದಿದೆ.
 
ಸರ್ಕಾರಿ ಶಾಲೆಗೆ ಸಂಬಂಧಿಸಿದ ಭೂಮಿಯನ್ನು ಬಿಜೆಪಿ ವಿಭಾಗೀಯ ಮುಖ್ಯಸ್ಥ ಅಲೋಕ್ ಸಿಂಗ್ ಅವರಿಂದ ಅತಿಕ್ರಮಣ ಮಾಡಲಾಗಿತ್ತು. ನಯಾಬ್ ತಹಸೀಲ್ದಾರ್ ಮತ್ತು ಆದಾಯ ಇಲಾಖೆಯ ಅವರ ತಂಡವು ಸ್ಥಳಕ್ಕೆ ತಲುಪಿದಾಗ, ಅವರು ಸುತ್ತುವರಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಎಸ್‌ಡಿಎಂ ದ್ವಿವೇದಿ ಅವರು ಸ್ಥಳಕ್ಕೆ ತಲುಪಿದರು, ಅಲ್ಲಿ ಅವರಿಗೆ ಸಂಸದ ಪ್ರತಿನಿಧಿ ರಾಜೇಶ್ ವರ್ಮಾ ಎದುರಾದರು.
 
ತೊಂದರೆಯಾಗಬಹುದೆಂದು ಊಹಿಸಿ ದ್ವಿವೇದಿಯವರು ಸ್ಥಳದಿಂದ ನಿರ್ಗಮಿಸಲು ಪ್ರಯತ್ನಿಸಿದರಾದರೂ, ವರ್ಮಾ ಮತ್ತು ರಾವತ್ ಅವರನ್ನು ತಡೆದರು.
 
ಜಿಲ್ಲಾಧಿಕಾರಿ ದ್ವಿವೇದಿ ಮಾತನಾಡಿ,  ಬಿಜೆಪಿ ವಿಭಾಗೀಯ ಮುಖ್ಯಸ್ಥ ಅಲೋಕ್ ಸಿಂಗ್ ಅವರು ಸರೋವರದ ಮೇಲೆ ಕಾನೂನು ಬಾಹಿರವಾಗಿ ಆಸ್ತಿ ಮತ್ತು ಸರ್ಕಾರಿ ಶಾಲೆಯ ಆಸ್ತಿಯನ್ನು ಅತಿಕ್ರಮಿಸಿದ ವರದಿಗಳಾಗಿವೆ. ಆದ್ದರಿಂದ ನಾವು ಅತಿಕ್ರಮಿಸಿದ ಸ್ಥಳವನ್ನು ತೆಗೆದುಹಾಕಲು ನಾಯಾಬ್ ತಹಸೀಲ್ದಾರ್ ಮತ್ತು ಆದಾಯ ಇಲಾಖೆಯ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದೆವು, 
 
ಆದರೆ, ನಮ್ಮ ತಂಡವು ಸಿಂಗ್ ಮತ್ತು ಅವರ ಬೆಂಬಲಿಗರನ್ನು ಎದುರಿಸಬೇಕಾಯಿತು. ಸಂಸದೆ ಪ್ರಿಯಾಂಕಾ ರಾವತ್ ಸಹ ಸ್ಥಳಕ್ಕೆ ತಲುಪಿದರು ಮತ್ತು ಅವರು ನಮ್ಮ ಕೆಲಸಕ್ಕೆ ಅಡ್ಡಿಯಾದರು. ನೂರಾರು ಜನರು ಒಟ್ಟುಗೂಡಿದರು ಮತ್ತು ನಮ್ಮ ಕರ್ತವ್ಯವನ್ನು ಮಾಡದಂತೆ ತಡೆಯುತ್ತಿದ್ದರಿಂದ ನಮ್ಮ ತಂಡವು ಮರಳಬೇಕಾಯಿತು. ಆದರೂ ಸಹ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆನ್‌ಲೈನ್ ಮಾರುಕಟ್ಟೆಗಳಲ್ಲಿ ರಿಯಾಯತಿ ಆಫರ್‌ಗಳ ಭರಾಟೆ