ಅನ್ನಕ್ಕೆ ಸಿಹಿ ಬೆರೆಸಿದಾಗ ನಾಲಿಗೆ ರುಚಿಗೆ ಬರ ಅನ್ನೋದೇ ಇರೋದಿಲ್ಲ. ಸಕ್ಕರೆ ಪೊಂಗಲ ಮಾಡಿ ಸಿಹಿ ರುಚಿ ನೋಡಿ.
ಏನೇನ್ ಬೇಕು?
ಅಕ್ಕಿ ಕಾಲು ಕಿಲೋ
ಹೆಸರು ಬೇಳೆ ಒಂದು ಹಿಡಿಯಷ್ಟು
ಹಾಲು ಅರ್ಧ ಬಟ್ಟಲು
ಕೊಬ್ಬರಿ ಕಾಲು ಗಿಟುಗು
ಏಲಕ್ಕಿ ಪುಡಿ ಒಂದು ಟೀ ಚಮಚ
ಪಚ್ಚ ಕರ್ಪೂರ ಕಾಲು ಟೀ ಚಮಚ
ಸಕ್ಕರೆ ಕಾಲು ಕಿಲೋ
ತುಪ್ಪ ಅರ್ಧ ಬಟ್ಟಲು
ಗೋಡಂಬಿ
ದ್ರಾಕ್ಷಿ
ಮಾಡೋದು ಹೇಗೆ?
ಪಾತ್ರೆಗೆ ತುಪ್ಪ ಹಾಕಿ ಅಕ್ಕಿ, ಬೆಳೆ, ಗೋಡಂಬಿ ಹುರಿದುಕೊಳ್ಳಿ. ಹಾಲು, ನೀರು ಸಮಪ್ರಮಾಣದಲ್ಲಿ ಹಾಕಿ ಮುಚ್ಚಿಡಿ. ಒಣಕೊಬ್ಬರಿ ತುರಿ ಹಾಕಿ ಎಲ್ಲವನ್ನೂ ಒಟ್ಟಾಗಿ ಬೇಯಿಸಿ.
ಬೆಂದ ನಂತರ ಸಕ್ಕರೆ ಹಾಕಿ ಕೆದಕುತ್ತಿರಿ. 10 ನಿಮಿಷಗಳ ನಂತರ ಏಲಕ್ಕಿ, ಪಚ್ಚ ಕರ್ಪೂರ ಪುಡಿ, ದ್ರಾಕ್ಷಿ, ಗೋಡಂಬಿ ಹಾಕಿ ಕೆಳಗಿಳಿಸಿ.