Publish Date: Tue, 09 Jun 2020 (09:24 IST)
Updated Date: Tue, 09 Jun 2020 (09:25 IST)
ಬೆಂಗಳೂರು: ಈರುಳ್ಳಿ ಕತ್ತರಿಸುವುದು ಎಂದರೆ ಎಲ್ಲರಿಗೂ ಭಾರೀ ತ್ರಾಸದ ಕೆಲಸ. ಕತ್ತರಿಸುವುದು ಸುಲಭವಾದರೂ ಅದರ ಜತೆಗೆ ಬರುವ ಕಣ್ಣುರಿ ಸಹಿಸಲು ಸಾಧ‍್ಯವಾಗದು.
ಈರುಳ್ಳಿ ಕತ್ತರಿಸುವಾಗ ಕಣ್ಣು ಉರಿ ಬಾರದಂತೆ ತಡೆಯಲು ಈ ಎರಡು ಕೆಲಸ ಮಾಡಿದರೆ ಸಾಕು. ಅದು ಏನು ಗೊತ್ತಾ? ಈರುಳ್ಳಿ ಕತ್ತರಿಸುವ ಮೊದಲು ಸಿಪ್ಪೆ ತೆಗೆದು ಕೆಲವು ಹೊತ್ತು ನೀರಿನಲ್ಲಿ ನೆನೆಸಿಡಿ.
ಇಲ್ಲವೇ ಈರುಳ್ಳಿ ಸಿಪ್ಪೆ ತೆಗೆದು ಒಂದು ಗಂಟೆ ಫ್ರಿಡ್ಜ್ ನಲ್ಲಿಡಿ. ತಂಪಾದ ಬಳಿಕ ತೆಗೆದು ಕತ್ತರಿಸುವುದರಿಂದ ಈರುಳ್ಳಿ ಕಣ್ಣೀರು ತರುವುದಿಲ್ಲ.