Publish Date: Sat, 20 Jun 2020 (21:13 IST)
Updated Date: Sat, 20 Jun 2020 (21:15 IST)
ನೀವು ಹಾಲು ಪ್ರಿಯರಾಗಿದ್ದರೆ ಅದರಿಂದ ಮಾಡಿದ ಸಂದೇಶ್ ಒಮ್ಮೆಯಾದರೂ ತಿನ್ನಲೇಬೇಕು.
ಏನೇನು ಬೇಕು?
ಒಂದು ಲೀಟರ್ ಎಮ್ಮೆ ಹಾಲು
ಸಕ್ಕರೆ 200 ಗ್ರಾಂ
50 ಗ್ರಾಂ ಪಿಸ್ತಾ
ಏಲಕ್ಕಿ ಪುಡಿ
ಎರಡು ನಿಂಬೆಹಣ್ಣು
ಮಾಡುವುದು ಹೇಗೆ?
ಹಾಲನ್ನು ಕಾಯಿಸಿ. ಕಾದ ಹಾಲಿಗೆ ನಿಂಬೆರಸ ಹಿಂಡಿ ಒಂದು ನಿಮಿಷ ಕುದಿಸಿ ಕೆಳಗಿಡಿ. ಒಡೆದ ಹಾಲನ್ನು ಬಟ್ಟೆಯಲ್ಲಿ ಶೋಧಿಸಿ ಉಳಿದ ಗಟ್ಟಿ ಹಾಲಿನ ಭಾಗವನ್ನು ಸಕ್ಕರೆ ಹಾಕಿ. ನೀರು ಎಲ್ಲಾ ಇಂಗಿ ಮುದ್ದೆ ಅಂತಾದಾಗ ಏಲಕ್ಕಿ ಪುಡಿ, ಪಿಸ್ತಾ ಸೇರಿಸಿ ಗೊಟಾಯಿಸಿ.