ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ತಾಟಿನುಂಗುವಿನಲ್ಲಿ ಅನೇಕ ಪ್ರಯೋಜನಗಳು ಇವೆಯೆಂದು ನಿಮಗೆ ತಿಳಿದಿದೆಯೆ? ಆರು ಬಾಳೆಹಣ್ಣಿನಲ್ಲಿರುವ ಪೋಟಾಷಿಯಂ ಒಂದು ತಾಟಿನುಂಗುನಲ್ಲಿ ಇರುತ್ತದೆಂದರೆ ನಂಬುತ್ತೀರಾ? ಹೌದ್ರಿ... ಇದನ್ನು ಐಸ್ ಆಪಲ್ ಅಂತಲೂ ಕರೆಯುತ್ತಾರೆ. ಪ್ರಕೃತಿಯ ಕೊಡುಗೆಯಾದ ತಾಟಿನುಂಗು.
ಈ ತಾಟಿನುಂಗುನಲ್ಲಿ ಅದ್ಭುತ ಔಷಧ ಗುಣಗಳು ಇರುವುದರಿಂದ ಸಾಧ್ಯವಾದರೆ ಇದನ್ನು ಪ್ರತಿದಿನ ಸೇವಿಸಲು ಪ್ರಯತ್ನಿಸಿ.
ತಾಟಿನುಂಗುವಿನ ಪ್ರಯೋಜನಗಳೇನೆಂದು ನೋಡೋಣ.
• ತಾಟಿ ನುಂಗು ಶರೀರದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುತ್ತದೆ.
• ತಾಟಿನುಂಗುವಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳಿಗೆ ಬಲವನ್ನು ನೀಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಇದರಲ್ಲಿರುವ ಎ,ಬಿ,ಸಿ ವಿಟಮಿನ್‌ಗಳು, ಐರನ್, ಜಿಂಕ್, ಫಾಸ್ಪರಸ್, ಪೋಟಾಷಿಯಂ ನಂತಹ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುತ್ತದೆ.
• ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಮಧುಮೇಹ ರೋಗಿಗಳಿಗೆ ಒಳ್ಳೆಯದು.
• ಯಕೃತ್ತಿನ ಸಮಸ್ಯೆಯಿಂದ ಹೋರಾಡುತ್ತಿರುವರು ಇದನ್ನು ಸೇವಿಸಿದರೆ ಉತ್ತಮ.
• ಮೊಡವೆಗಳಿದ್ದರೆ, ತಾಟಿನುಂಗು ಪ್ರತಿದಿನ ಸೇವಿಸಿದರೆ ಕಡಿಮೆಯಾಗುತ್ತದೆ
• ಬೇಸಿಗೆಯಲ್ಲಿ ದೇಹದಲ್ಲಿನ ಗ್ಲೂಕೋಸ್ ಅಂಶದ ಏರುಪೇರುಗಳನ್ನು ನಿಯಂತ್ರಿಸುತ್ತದೆ.
• ತಾಟಿನುಂಗುವಿನಲ್ಲಿರುವ ಪೋಟಾಷಿಯಂ ದೇಹದಲ್ಲಿರುವ ವಿಷಪದಾರ್ಥಗಳನ್ನು ತೊಲಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
• ಉರಿಬಿಸಿಲಿನ ಕಾರಣದಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾದರೆ, ಆ ಸಮಯದಲ್ಲಿ ತಾಟಿನುಂಗು ಸೇವಿಸಿದರೆ ಉಪಶಮನವಾಗುತ್ತದೆ.
• ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ತಡೆಯಲು ತಾಟಿನುಂಗು ಸಹಾಯಕವಾಗಿದೆ. ಟ್ಯೂಮರ್, ಬ್ರೆಸ್ಟ್ ಕ್ಯಾನ್ಸರ್ ಕಣಗಳನ್ನು ವೃದ್ದಿಸುವ ಪೆಟ್ರೋ ಕೆಮಿಕಲ್ಸ್ ಆಂಥೋಸೈನಿನ್ ನಂತಹವುಗಳನ್ನು ನಾಶಮಾಡುತ್ತದೆ.