ನೆದರ್ ಲ್ಯಾಂಡ್ : ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ನೆದರ್ಲ್ಯಾಂಡ್ ದೇಶದಲ್ಲಿ ಜನರಿಗೆ ಬಂಪರ್ ಆಫರ್ ವೊಂದನ್ನು ಘೋಷಣೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ವಾಹನಗಳಿಂದ ವಾಯುಮಾಲಿನ್ಯ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಈ ವಾಯುಮಾಲಿನ್ಯವನ್ನು ತಡೆಗಟ್ಟಲು ಸೈಕಲ್ ಬಳಕೆ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ನೆದರ್ಲ್ಯಾಂಡ್ ಸರ್ಕಾರವು ಸೈಕಲ್ ಸವಾರರಿಗೆ ಹಣ ನೀಡ್ತಿದೆ.
ಇಲ್ಲಿನ ಜನರು ಸೈಕಲ್ ಮೂಲಕ ಕಚೇರಿಗೆ ಹೋದ್ರೆ ಅಂಥವರಿಗೆ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿಯಂತೆ ಸರ್ಕಾರ ಹಣ ನೀಡುತ್ತದೆ. ಈ ಉದ್ಯೋಗಿಗಳಿಗೆ ಅವರು ಕೆಲಸ ಮಾಡುವ ಕಚೇರಿ ವತಿಯಿಂದ ತೆರಿಗೆಯಲ್ಲಿ ವಿನಾಯತಿ ಸಿಗಲಿದೆಯಂತೆ. ಈ ಸೌಲಭ್ಯ ಉದ್ಯೋಗಿಗಳಿಗೆ ಮಾತ್ರ ಮೀಸಲಾಗಿದ್ದು, ಕಚೇರಿಗೆ ಸೈಕಲ್ ಮೇಲೆ ಹೋದ್ರೆ ಮಾತ್ರ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿ ಸಿಗಲಿದೆ. ವೈಯಕ್ತಿಕ ಕೆಲಸಕ್ಕೆ ಹೋದ್ರೆ ಹಣ ಸಿಗುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.