ಪ್ರೇಮಿಗಳ ದಿನಕ್ಕೆ ಸಕತ್ ಥ್ರೀಲ್ ಕೊಡುತ್ತವೆ ಈ ಹಾಡುಗಳು..!!

ರಾಮಕೃಷ್ಣ ಪುರಾಣಿಕ
ಗುರುವಾರ, 8 ಫೆಬ್ರವರಿ 2018 (15:44 IST)
ಪ್ರತಿ ವರ್ಷದ ಫೆಬ್ರವರಿ ತಿಂಗಳನ್ನು ಪ್ರೇಮಿಗಳಿಗಾಗಿಯೇ ಮೀಸಲಿಡಲಾಗಿದೆ. ಜಾತಿ, ಮತ, ಧರ್ಮಗಳ ಬೇಧವಿಲ್ಲದೇ ಪ್ರೇಮಿಗಳು ಆಚರಿಸುವ ಹಬ್ಬ ಇದಾಗಿದೆ. ಫೆಬ್ರವರಿ 7 ರಿಂದಲೇ ರೋಸ್ ಡೇ ಎಂದು ಆರಂಭವಾಗುವ ಈ ವ್ಯಾಲಂಟೈನ್ಸ್‌ ಡೇ ಫೆಬ್ರವರಿ 14 ರಂದು ಮುಗಿಯುತ್ತದೆ. ಯುವಕ ಯುವತಿಯರು ಈ ದಿನಕ್ಕಾಗೇ ಕಾದು ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುತ್ತಾರೆ ಮತ್ತು ತಮ್ಮ ಹುಡುಗ ಅಥವಾ ಹುಡುಗಿಗೆ ಇಷ್ಟವಾಗುವ ಉಡುಗೊರೆಗಳನ್ನು ಕೊಟ್ಟು ಜೊತೆಯಲ್ಲಿ ಸಮಯವನ್ನು ಕಳೆಯುತ್ತಾರೆ.
ಪ್ರೇಮಿಗಳ ಈ ದಿನವನ್ನು ಸುಂದರವಾಗಿಸಲು ಮತ್ತು ನಿಮ್ಮ ಅತಿ ದೊಡ್ಡ ದಿನವನ್ನು ಅವಿಸ್ಮರಣೀಯವನ್ನಾಗಿಸಲು ನಾವು ಕೆಲವೊಂದು ಹಾಡುಗಳನ್ನು ಸೂಚಿಸಿದ್ದೇವೆ. ನಿಮ್ಮ ಪ್ರೇಮಿಯೊಂದಿಗೆ ಈ ರೋಮ್ಯಾಂಟಿಕ್ ಹಾಡುಗಳನ್ನು ಕೇಳುತ್ತಾ ನಿಮ್ಮ ದಿನವನ್ನು ಆನಂದಿಸಿ.
 
ಮೊದಲನೆಯದಾಗಿ 'ದಿಲ್‌ವಾಲೆ' ಚಿತ್ರದ 'ಗೇರುವಾ' ಹಾಡು. ಈ ಹಾಡು ಅರಿಜಿತ್ ಸಿಂಗ್ ಮತ್ತು ಅಂತಾರಾ ಮಿತ್ರ ಅವರ ಧ್ವನಿಯಲ್ಲಿ ಕೇಳಲು ಹಿತವಾಗಿದ್ದರೆ ಅದರಲ್ಲಿರುವ ಐಸ್‌ಲ್ಯಾಂಡ್‌ನ ಮನಮೋಹಕ ದೃಶ್ಯಗಳು ನೋಡಲು ಸಹ ಅಷ್ಟೇ ಸುಂದರವಾಗಿದೆ. ಇದರ ಹೊರತಾಗಿ ಹಿಂದೆ ಉತ್ತಮ ಜೋಡಿ ಎಂದೇ ಹೆಸರಾಗಿರುವ ಕಾಜೋಲ್ ಮತ್ತು ಶಾರುಖ್ ಈ ಹಾಡಿನಲ್ಲಿರುವುದರಿಂದ ನಮ್ಮ ಮೊದಲ ಆಯ್ಕೆ ಇದಾಗಿದೆ.
 
ಫೆಬ್ರವರಿ 12 ರಂದು ಬಿಡುಗಡೆಯಾಗುತ್ತಿರುವ ಚಿತ್ರ 'ವಿ-ಡೇ' ಯ 'ಯೇ ಫಿತೂರ್ ಮೆರಾ' ಹಾಡನ್ನು ನೋಡಲೇ ಬೇಕು. ಈ ಹಾಡನ್ನೂ ಸಹ ಅರಿಜಿತ್ ಸಿಂಗ್ ಹಾಡಿದ್ದು, ಹಾಡಿನಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಕತ್ರಿನಾ ಕೈಫ್ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.
 
ಕಳೆದ ವರ್ಷ 2017 ರಲ್ಲಿ ಎಲ್ಲಾ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ 'ಬಾಜಿರಾವ್ ಮಸ್ತಾನಿ'. ಈ ಚಿತ್ರದ 'ದಿವಾನಿ ಮಸ್ತಾನಿ' ಹಾಡನ್ನು ಯಾರು ತಾನೇ ಮರೆಯಲು ಸಾಧ್ಯ? ಸುಂದರವಾಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ, ಅಷ್ಟೇ ಸುಂದರವಾದ ಸೆಟ್ ಮತ್ತು ಚಿತ್ರೀಕರಣ. ಈ ಹಾಡು ನಿಮ್ಮ ದಿನವನ್ನು ಸುಂದರವಾಗಿಸುವುದರಲ್ಲಿ ಸಂಶಯವೇ ಇಲ್ಲ, ಹಾಗಾಗಿ ನಮ್ಮ ಪಟ್ಟಿಯಲ್ಲಿ ಈ ಹಾಡೂ ಸಹ ಸೇರಿಕೊಳ್ಳುತ್ತದೆ.
 
ತಮ್ಮ ಜೀವನದ ಕಠಿಣ ಸಮಯವನ್ನು ಎದುರಿಸುತ್ತಿರುವ ಪ್ರೇಮಿಗಳಿಗಾಗಿ ನಾವು ಸೂಚಿಸುತ್ತಿರುವ ಹಾಡು 'ತಮಾಷಾ' ಚಿತ್ರದ 'ಅಗರ್ ತುಮ್ ಸಾತ್ ಹೋ'. ಮಾಜಿ ಪ್ರೇಮಿಗಳಾದ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿರುವ ಈ ಹಾಡು ನಿಮ್ಮ ಹಲವು ನೆನಪುಗಳನ್ನು ಕಣ್ಣು ಮುಂದೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ.
 
ನಾವು ನಿಮಗಾಗಿ ಸೂಚಿಸುತ್ತಿರುವ ಕೊನೆಯ ಹಾಡು 'ಆಶಿಖಿ-2' ಚಿತ್ರದ 'ತುಮ್ ಹಿ ಹೋ'. ಆದಿತ್ಯ ರಾಯ್ ಕಪೂರ್ ಮತ್ತು ಶೃದ್ಧಾ ಕಪೂರ್ ಅಭಿನಯಿಸಿರುವ ಹಾಗೂ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಹಾಡಿರುವ ರೋಮ್ಯಾಂಟಿಕ್ ಗೀತೆ ಇದಾಗಿದೆ. ಚಿತ್ರ ಬಿಡುಗಡೆಯಾಗಿ 4-5 ವರ್ಷಗಳಾದರೂ ಕೂಡ ಈ ಚಿತ್ರದ ಹಾಡುಗಳು ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೆಯೇ ಉಳಿದುಕೊಂಡಿದೆ. ಪ್ರೇಮಿಗಳ ದಿನದಂತಹ ರೋಮ್ಯಾಂಟಿಕ್ ದಿನಕ್ಕೆ ಈ ರೋಮ್ಯಾಂಟಿಕ್ ಗೀತೆಯನ್ನು ನಮ್ಮ ಪಟ್ಟಿಗೆ ಸೇರಿಸುತ್ತಿದ್ದೇವೆ. ಪ್ರೇಮಿಗಳ ದಿನದಂದು ಈ ಹಾಡುಗಳನ್ನು ನೋಡಿ ಮತ್ತು ಕೇಳಿ ನಿಮ್ಮ ದಿನವನ್ನು ಅವಿಸ್ಮರಣೀಯವಾಗಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಕಾಲಿನ ಮಾಂಸಖಂಡಗಳು ನೋವಾಗುತ್ತಿದೆಯಾ, ಇದಕ್ಕೆ ಕಾರಣ ಇಲ್ಲಿದೆ

ಮುಟ್ಟು ತಡವಾಗಿ ಆಗ್ತಿದೆಯಾ, ಇದಕ್ಕೆ ಕಾರಣಗಳು ಹೀಗಿರಬಹುದು

ಮುಂದಿನ ಸುದ್ದಿ
Show comments