Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಪ್ರೇಮಿಗಳ ದಿನದಂದೇ ಪ್ರೇಮ ನಿವೇದನೆ ಮಾಡಬೇಕು, ಪ್ರೇಮಿಯನ್ನು ಯಾರೂ ಇಲ್ಲದ ಏಕಾಂತ ಸ್ಥಳಕ್ಕೆ ಕರೆದೊಯ್ಯಬೇಕು.. ಹೀಗೆಲ್ಲಾ ಏನೇನೋ ಯೋಜನೆಗಳು ನಿಮಗಿರಬಹುದು. ಎಲ್ಲಿಗೆ ಕರೆದುಕೊಂಡು ಹೋದರೆ ಸೂಕ್ತ?
ಬೀಸೋ ಗಾಳಿ ನಡುವೆ ನಾ ಕೂಗಿ ಹೇಳಬೇಕು!
ನಿಮ್ಮ ಇಷ್ಟದ ಸಂಗಾತಿಯ ಕೈ ಹಿಡಿದು, ಕಣ್ಣಲ್ಲಿ ಕಣ್ಣು ನೆಟ್ಟು ಪ್ರೇಮ ನಿವೇದನೆ ಮಾಡಲು ಸುತ್ತ ಹಸಿರು, ತಂಪಾದ ಗಾಳಿ ಬೀಸುತ್ತಿರಬೇಕು ಎಂದರೆ ಕೆಮ್ಮಣ್ ಗುಂಡಿ, ಚಿಕ್ಕ ಮಗಳೂರಿನ ಚುಮು ಚುಮು ಸ್ಥಳಕ್ಕೆ ಭೇಟಿ ಕೊಡಿ.
ಹರಿಯುವ ನೀರಿನಲಿ ನಾ ಆಡಬೇಕು!
ಜುಳು ಜುಳು ನದಿ ನೀರಿನಲಿ ಕಾಲಾಡಿಸುತ್ತಾ ಸೊಂಪಾದ ನೆರಳಿನಲಿ ಮೈ ಮರೆಯಬೇಕೆಂದರೆ ನಮ್ಮ ರಾಜ್ಯದಲ್ಲಿ ಅದೆಷ್ಟು ಸ್ಥಳಗಳಿಲ್ಲ? ಮಂಗಳೂರಿನ ಕಡಲ ಕಿನಾರೆಯಿಂದ ಹಿಡಿದು, ಜೋಗದ ಗುಂಡಿ, ಕಾವೇರಿ ನದಿ ಹುಟ್ಟುವ ಮಡಿಕೇರಿ ಸೂಕ್ತ.
ರಾಜ ನಾನು ರಾಣಿ ನೀನು!
ಮೈಸೂರಿಗಿಂತ ಹೆಚ್ಚು ಅರಮನೆ ಬೇಕೇ? ಅರಮನೆ ಎದುರು ನಿಂತು ರಾಜ-ರಾಣಿಯ ಹಾಗೆ ನಿಂತು ಮಂಡಿಯೂರಿ ನಿಂತು ಪ್ರಪೋಸ್ ಮಾಡುವುದು ಎಷ್ಟು ರೊಮ್ಯಾಂಟಿಕ್ ಗೊತ್ತಾ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ