Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿವಾಹಪೂರ್ವ ಲೈಂಗಿಕ ಸಂಪರ್ಕದ ಬಗ್ಗೆ ಪತಿ ಬಳಿ ಹೇಳಿಕೊಳ್ಳಬೇಕೇ?

ವಿವಾಹಪೂರ್ವ ಲೈಂಗಿಕ ಸಂಪರ್ಕದ ಬಗ್ಗೆ ಪತಿ ಬಳಿ ಹೇಳಿಕೊಳ್ಳಬೇಕೇ?
ಬೆಂಗಳೂರು , ಮಂಗಳವಾರ, 4 ಸೆಪ್ಟಂಬರ್ 2018 (08:52 IST)
ಬೆಂಗಳೂರು: ವಿವಾಹಕ್ಕೆ ಮೊದಲು ಬೇರೆ ಸಂಗಾತಿಯ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದ ಯುವತಿಯರಿಗೆ ಮದುವೆಯಾಗುವಾಗ ಇಂತಹದ್ದೊಂದು ಪ್ರಶ್ನೆ ಕಾಡುವುದು ಸಹಜ.

ಮದುವೆಗೆ ಮೊದಲು ಯಾವುದೋ ಕಾರಣಕ್ಕೆ ಲೈಂಗಿಕ ಸಂಪರ್ಕ ನಡೆಸಿದ ಯುವತಿಯರಿಗೆ ಈ ವಿಚಾರವನ್ನು ತನ್ನ ಪತಿ ಬಳಿ ಹೇಳಿಕೊಳ್ಳಬೇಕೇ? ಹೇಳಿಕೊಳ್ಳದಿದ್ದರೆ ಅದು ಆತನಿಗೆ ಗೊತ್ತಾಗಿ ಸಮಸ್ಯೆಯಾಗಬಹುದೇ ಎಂಬ ಅನುಮಾನಗಳು ಕಾಡುತ್ತವೆ.

ಇಂತಹ ಸಂದರ್ಭದಲ್ಲಿ ತಾವು ಮದುವೆಯಾಗುತ್ತಿರುವ ಹುಡುಗ ಅಥವಾ ಪತಿ ಎಂತಹ ಸ್ವಭಾವದವರು ಎನ್ನುವುದು ಮುಖ್ಯ. ಒಂದು ವೇಳೆ ಆತ ಅರ್ಥ ಮಾಡಿಕೊಳ್ಳುವಂತಹ ಮನಸ್ಸಿನವನಾಗಿದ್ದರೆ ಮುಕ್ತವಾಗಿ ಈ ವಿಚಾರವನ್ನು ಹೇಳಿ ಮುಂದುವರಿಯಬಹುದು. ಅದೂ ಕೂಡಾ ನಿಮ್ಮ ಮನಸ್ಸಿಗೆ ಕಾಡುತ್ತಿದ್ದರೆ ಮತ್ತು ಮುಂದೆ ಸಮಸ್ಯೆಯಾಗಬಹುದು ಎಂದಾದರೆ ಮಾತ್ರ.

ಇಲ್ಲವಾದರೆ, ವಿವಾಹ ಪೂರ್ವ ಲೈಂಗಿಕ ಕ್ರಿಯೆ ಬಗ್ಗೆ ಪತಿಯ ಜತೆ ಹಂಚಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲವಾದರೆ ಹೇಳಿಕೊಳ್ಳಬೇಕೆಂದೇನೂ ಇಲ್ಲ. ಹಿಂದಿನ ಕಹಿಯನ್ನು ಮರೆತು ಭವಿಷ್ಯವನ್ನು ಸಂತೋಷವಾಗಿ ಕಳೆಯುತ್ತೇನೆಂಬ ನಂಬಿಕೆಯಿದ್ದರೆ ಹಳೆಯದನ್ನು ಕೆದಕಿ ಜೀವನ ಹಾಳುಮಾಡಿಕೊಳ್ಳಬೇಕಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೊಳಕೆ ಬರಿಸಿದ ಕಾಳುಗಳಿಂದ ಮತ್ತು ಧಾನ್ಯಗಳಿಂದ ಆರೋಗ್ಯ ವರ್ಧನೆ!!!